ಬಿಸಿ ನೀರನ್ನು ಕುಡಿಯುವುದರಿಂದ ಏನೆಲ್ಲ ಉಪಯೋಗವಿದೆ ಎಂಬುದು ನಿಮಗೆ ತಿಳಿದಿದೆಯೇ ..?

ಬಿಸಿ ನೀರನ್ನು ನೀವು ದೀರ್ಘಕಾಲದವರೆಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆಗೆ ಸಹ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದು. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ.

Does drinking warm water in summer help? | Lifestyle News,The Indian Express

ನಮ್ಮ ಜೀವನಶೈಲಿ ಮತ್ತು ದೇಹದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿದಿನ 11 ರಿಂದ 16 ಲೋಟ ನೀರನ್ನು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ನಮ್ಮಲ್ಲಿ ಹೆಚ್ಚಿನ ವರು ತಣ್ಣೀರನ್ನು ಕುಡಿಯಲು ಒಲವು ತೋರಿದರೆ, ಆಯುರ್ವೇದವು ತಣ್ಣನೆ ನೀರನ್ನು ಕುಡಿಯುವ ಬದಲು ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತದೆ. ನಿಮ್ಮ ದೇಹದಲ್ಲಿರುವ ತ್ಯಾಜ್ಯವನ್ನು ಹೊರ ಹಾಕುವಲ್ಲಿ ಬಿಸಿ ನೀರು ಕೆಲಸ ಮಾಡುವಂತೆ ಬೇರೆ ಯಾವುದು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದನ್ನೂ ಓದಿ : – ದಿನ ನಿತ್ಯ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಪ್ರಯೋಜನಗಳೆನು..?

5 Ways Hot Water Can Benefit Your Body

ನಾವು ಕುಡಿಯುವ ಬಿಸಿ ನೀರು ಸೇವಿಸುವ ಆಹಾರವನ್ನು ದೇಹದಲ್ಲಿ ಒಡೆಯಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುತ್ತದೆ. ಇದರಿಂದ ನಾವು ಸೇವಿಸಿದ ಆಹಾರ ಜೀರ್ಣಿಸಿಕೊಳ್ಳಲು ಸುಲಭ ಮಾಡುತ್ತದೆ. ನೀವು ಮಲಬದ್ಧತೆ, ಕೆಮ್ಮು, ಶೀತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಪ್ರತಿದಿನ ಬಿಸಿ ನೀರನ್ನು ಕುಡಿಯುತ್ತಲೇ ಇರುವುದು ಒಳ್ಳೆಯದು.

Beauty Benefits of Drinking Hot Water | Be Beautiful India

ಬಿಸಿ ನೀರು ಕುಡಿಯುವುದರಿಂದ ನಿಮಗಿರುವ ಮೈಗ್ರೇನ್ ಮತ್ತು ಇತರೆ ರೀತಿಯ ತಲೆನೋವು, ಮುಟ್ಟಿನ ಸಮಯದಲ್ಲಿ ಆಗುವಂತಹ ನೋವುಗಳಿಂದ ತಕ್ಷಣ ಪರಿಹಾರ ಸಿಗುತ್ತದೆ. ಬಿಸಿ ನೀರು ಚರ್ಮಕ್ಕೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.

Why Do Some People Prefer Drinking Warm Water?

ಬಿಸಿ ನೀರನ್ನು ಕುಡಿಯುವುದರಿಂದ ಚರ್ಮದಲ್ಲಿರುವ ಜೀವಕೋಶಗಳನ್ನು ಸರಿಪಡಿಸುವ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಾಗುವಂತೆ, ಬಿಸಿ ನೀರನ್ನು ನಿಂಬೆಯ ಹುಳಿಯೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ, ಏಕೆಂದರೆ ಇದು ದೇಹದ ಪಿಎಚ್ ಸಮತೋಲನ ರಕ್ಷಿಸುತ್ತದೆ. ಮೊಡವೆಗಳು, ಸುಕ್ಕುಗಳು ಮತ್ತು ಕಪ್ಪು ಕಲೆಗಳಿಂದ ನಿಮ್ಮ ಮುಖವನ್ನು ದೂರವಿಡುವುದು. ಇದನ್ನೂ ಓದಿ : – ಬೆಟ್ಟದ ನೆಲ್ಲಿಕಾಯಿಯನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲ ಪ್ರಯೋಜನೆ ಇದೆ ನಿಮಗೆ ತಿಳಿದಿದೆಯೇ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!