ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರೋದಾಗಿ ಅಪರಿಚಿತನಿಂದ ಬೆದರಿಕೆ ಕರೆ ಬಂದಿದೆ. ಪರಿಣಾಮ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
![Bomb threatening call to Kempegowda airport in the morning | ಬೆದರಿಕೆ ಕರೆಯಿಂದ ಏರ್ ಪೋರ್ಟ್ ನಲ್ಲಿ ಕೆಲ ಕಾಲ ಭಯದ ವಾತಾವರಣ Crime News in Kannada](https://kannada.cdn.zeenews.com/kannada/sites/default/files/styles/zm_700x400/public/2022/05/20/240174-fake-bomb-at-bengaluru-airp.jpg?itok=_f86ghD9)
ಬೆಳಗಿನ ಜಾವ 3.30 ಸಮಯದಲ್ಲಿ ಅಪರಿಚಿತನೊಬ್ಬ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ ಏರ್ ಲೈನ್ಸ್ ಗೇಟ್, ಟರ್ಮಿನಲ್ ಮತ್ತು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.
![](https://rajnewskannada.in/wp-content/uploads/2022/05/image-15.jpeg)
ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಏರ್ಪೋರ್ಟ್ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಆದ್ರೆ ಯಾವುದೇ ಅನುಮಾನಸ್ಫದವಾದ ವಸ್ತು ಕಂಡುಬಂದಿಲ್ಲ.
ಇದನ್ನೂ ಓದಿ : – ಜ್ಞಾನವಾಪಿ ಮಸೀದಿಯೊಳಗೆ ಇದೆಯಂತೆ ಶೇಷನಾಗನ ಶಿಲ್ಪಕಲೆ