ಬಿಜೆಪಿ (BJP) ದ್ವೇಷದ ರಾಜಕಾರಣ ಮಾಡುತ್ತಿದ್ದು ಕಳೆದ ಮೂರು ದಿನಗಳಿಂದ ರಾಹುಲ್ ಗಾಂಧಿಯವರನ್ನು (Rahul gandhi) ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ನ್ಯಾಷನಲ್ ಹೆರಾಲ್ಡ್ ನಲ್ಲಿ (National herald) ಇವರು ಟ್ರಸ್ಟಿಗಳು ಮಾತ್ರ. ಇವರ ವಿರುದ್ದ ಸುಳ್ಳು ಮೊಕದ್ದಮೆ ಹೂಡಿದ್ದಾರೆ. ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Soniya gandhi) ಅವರಿಗೆ ಕಿರುಕಿಳ ನೀಡುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ದೇಶದಲ್ಲಿ ಹಲವಾರು ಹೋರಾಟಗಳನ್ನ ಮಾಡಿದೆ. ನಮ್ಮ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಇಂತಹ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಎಐಸಿಸಿ (AICC) ಕಛೇರಿಗೆ ಮುತ್ತಿಗೆ ಹಾಕಿ ಎಲ್ಲರನ್ನ ಬಂಧಿಸಿದ್ದಾರೆ ಇದೆಲ್ಲ ಯಾವಾಗಾದ್ರು ನಡೆದಿತ್ತಾ ? ಇದೆಲ್ಲವೂ ಬಿಜೆಪಿಯ ದ್ವೇಷದ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಹೋರಾಟ ಧಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರಿಗೆ ಕೇಡುಗಾಲ ಬಂದಿದೆ ಹಾಗಾಗಿ ಈ ರೀತಿ ನಡೆದು ಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಾಳೆ ರಾಜಭವನ (Rajbhavan) ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ರು. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಬಿಜೆಪಿ ಅಲ್ಲ. ಬಿಜೆಪಿಯವರು ಯಾರು ತ್ಯಾಗ ಬಲಿದಾನ ಮಾಡಿಲ್ಲ. ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಇದೆ. ನಮ್ಮನ್ನ ಯಾರು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶಹೊರ ಹಾಕಿದ್ರು. ಬಿಜೆಪಿಯವರು ಎಲ್ಲಾ ಕಡೆ ಕಾನೂನಿನ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಅವರನ್ನ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ರು.ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆ- ದೀದಿ ಕರೆದ ಸಭೆಗೆ TRS ಗೈರು
ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ (DKShivakumar)ಮಾತನಾಡಿ ಈ ದೇಶದಲ್ಲಿ ಅಧಿಕಾರದ ದುರುಪಯೋಗ ಅಗುತ್ತಿದೆ. ಸಂವಿಧಾನವನ್ನು , ಕಾನೂನನ್ನು ಗಾಳಿಗೆ ತೂರಿ ಕಾಂಗ್ರೆಸ್ ಮುಚ್ಚಿಸಲು ತಂತ್ರ ನಡೆಯುತ್ತದೆ. ನಮ್ಮ ನಾಯಕರನ್ನ ೨೫ ಗಂಟೆ ವಿಚಾರಣೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ ರಾಹುಲ್ ಗಾಂಧಿ ಕೂಡ ಪ್ರಧಾನಿ ಆಗಬಹುದಿತ್ತು, ಅದ್ರೆ ದೇಶದ ಅಭಿವೃದ್ದಿಗಾಗಿ ಬಿಟ್ಟುಕೊಟ್ಟರು. ದೇಶದಲ್ಲಿ ಹಲವಾರು ಪ್ರತಿಕೆಗಳು ಬದುಕಿದ್ದಾವೆ, ಹಾಗೆ ಸತ್ತಿದ್ದಾವೆ. ೯೦ ಕೋಟಿ ನೀಡಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯನ್ನು ಕಾಂಗ್ರೆಸ್ (Congress) ಉಳಿಸಿಕೊಂಡಿತ್ತು. ಕಾನೂನಿನ ಅಡಿಯಲ್ಲಿ ನಮ್ಮ ಆಸ್ತಿಯನ್ನ ನಾವು ಉಳಿಸಿಕೊಂಡಿದ್ದೇವೆ ಆದ್ರೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಆಸ್ತಿಯನ್ನು ಲೂಟಿ ಮಾಡಿದ್ದಾರೆ ಅಂತ ಬಿಂಬಿಸುತ್ತಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ರು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಸರಲ್ಲಿ ಯಾವ ಪ್ರಾಪರ್ಟಿ ಇಲ್ಲ ದೇಶಕ್ಕಾಗಿ ಪ್ರಾಣ ಕೊಟ್ಟ ಕುಟುಂಬಕ್ಕೆ ಮನಿ ಲ್ಯಾಂಡ್ರಿಂಗ್ ಅಂತ ಅರೋಪ ಮಾಡುತ್ತಿದ್ದೀರಾ ? ನಿಮಗೆ ನಾಚಿಕೆ ಅಗಲ್ವ ಅಂತ ಡಿಕೆಶಿ ಗುಡುಗಿದ್ದಾರೆ.
ಕಾಂಗ್ರೆಸ್ ಎಂಬುದು ಒಂದು ದೇವಸ್ಥಾನ ಇದ್ದಂತೆ ಇದು ಯಾವ ಪೋಲಿಸ್ ರಾಜ್ಯ ಇದು ಯಾವ ಕಾನೂನು . ಳ್ಳಿ ಹಳ್ಳಿಗಳಿಗೆ ಮುಟ್ಟುವಂತೆ ಪ್ರತಿಭಟನೆ ಮಾಡುತ್ತೇವೆ. ನಿಮ್ಮ ಅಧಿಕಾರ, ನಿಮ್ಮ ಪಾರ್ಟಿ , ಹೀನಾಯ ಸ್ಥಿತಿಗೆ ಬರುತ್ತೆ. ನಮ್ಮ ನಾಯಕರಿಗೆ,ಕಾರ್ಯಕರ್ತರಿಗೆ ಹೀನಾಯವಾಗಿ ಹಿಂಸೆ ಕೊಡುತ್ತಿದ್ದೀರಿ. ಇದು ಅಧಿಕಾರದ ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ಮೇಲೆ ಕೇಸ್ ಹಾಕಿದ್ರು ಪರವಾಗಿಲ್ಲ ನಾವಂತು ಬಿಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ . ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ನಾಳೆ ಮಮತಾ ಬ್ಯಾನರ್ಜಿ ಸಭೆ – ಕಾಂಗ್ರೆಸ್ , ಎನ್ ಸಿ ಪಿ ಭಾಗಿ