ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಮುಂಬರುವ ಚುನಾವಣೆಗೆ ಸಿದ್ಧತೆ ಮಾಡಲಾಗ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Bs yediyuappa) ಹೇಳಿದ್ದಾರೆ.
ತುಮಕೂರಿನಲ್ಲಿ (Tumkuru) ಮಾತನಾಡಿದ ಅವರು ನಮ್ಮ ಉದ್ದೇಶ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೊಮ್ಮೆ ಬಿಜೆಪಿಯನ್ನ (BJP) ಅಧಿಕಾರಕ್ಕೆ ತರಬೇಕು. ಈ ಹಿನ್ನಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಈಗಾಗಲೇ ಪ್ರವಾಸ ಆರಂಭ ಮಾಡಿದ್ದೇವೆ. ಜಿಲ್ಲೆಗಳಿಗೆ ಹೋಗಿ ಕಾರ್ಯಕರ್ತರ ಜೊತೆ ಕುಳಿತು ಮಾತನಾಡಿ, ಎಲ್ಲಾ ವರ್ಗದ ಜನರನ್ನ ತಮ್ಮ ಜೊತೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡ್ತೇವೆ. ಅನೇಕ ಜನ ಬಿಜೆಪಿ ಪಕ್ಷಕ್ಕೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಯಾರ್ಯಾರು ಬರೋದ್ರಿಂದ ನಮ್ಮ ಪಕ್ಷಕ್ಕೆ ಲಾಭ ಆಗುತ್ತೆ ಅಂತವರನ್ನ ಸೇರಿಸಿ ಪಕ್ಷ ಬಲಪಡಿಸುವಂತ ಪ್ರಾಮಾಣಿಕ ಕೆಲಸವನ್ನ ಮಾಡ್ತೇವೆ ಎಂದು ಹೇಳಿದರು. ಇದೇ ವೇಳೆ ಅನೇಕ ಜನ ಬಿಜೆಪಿಗೆ ಬರ್ತಾ ಇದ್ದಾರೆ. ಪಕ್ಷಕ್ಕೆ ಬರೋರನ್ನ ಯಾರು ಬೇಡ ಅಂತ ಹೇಳಲ್ಲ. ಬರೋರಿಗೆ ಯಾರಿಗೆ ಏನ್ ಜವಾಬ್ದಾರಿ ಕೊಡ್ಬೇಕು ಅಂತ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ರು.
ಕಾನೂನಿನ ಮುಂದೆ ಎಲ್ಲರೂ ಒಂದೆ
ಇದೇ ವೇಳೆ ರಾಹುಲ್ ಗಾಂಧಿ (Rahul gandhi) ED ವಿಚಾರಣೆ ವಿಚಾರಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ. ED ಯವರು ಯಾರ್ ಬಗ್ಗೆ ಏನ್ ಅನುಮಾನ ಇರುತ್ತೆ ಅವರನ್ನ ತನಿಖೆ ಮಾಡ್ತಾರೆ. ಸತ್ಯಾಸತ್ಯಾತೆ ಹೊರಬರುತ್ತೆ. ನಿರಾಪರಾಧಿಯಾದ್ರೆ ಯಾವುದೇ ಗೊಂದಲ ಇಲ್ಲದೇ ವಾಪಸ್ ಬರ್ತಾರೆ. ಅಪರಾಧಿಗಳಾದ್ರೆ ಸಹಜವಾಗಿ ಯಾರಿಗೆ ಯಾವ ರೀತಿಯಾಗಿ ಶಿಕ್ಷೆ ಆಗ್ಬೇಕು ಆ ರೀತಿಯಾಗಿ ಶಿಕ್ಷೆ ಆಗುತ್ತೆ. ಕಾನೂನಿನಲ್ಲಿ ರಾಹುಲ್ ಗಾಂಧಿ, ಯಡಿಯೂರಪ್ಪ ಬೇರೆ ಮತ್ತೊಬ್ಬರು ಬೇರೆ ಪ್ರಶ್ನೆಯೇ ಇಲ್ಲ. ED ಅವರು ತನಿಖೆ ಮಾಡ್ತಿದ್ದಾರೆ ಕಾದು ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ನಾಳೆ ಮಮತಾ ಬ್ಯಾನರ್ಜಿ ಸಭೆ – ಕಾಂಗ್ರೆಸ್ , ಎನ್ ಸಿ ಪಿ ಭಾಗಿ
ಇದೇ ವೇಳೆ ಹೊಸ ಲೋಕಾಯುಕ್ತ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಹೊಸ ಲೋಕಾಯುಕ್ತ ಅಧ್ಯಕ್ಷರು ಆಯ್ಕೆ ಆಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡ್ತಿನಿ ಅಂತ ಹೇಳಿದ್ದಾರೆ ಎಂದು ಹೇಳಿದ್ರು.
ವಿಜಯೇಂದ್ರ ತುಮಕೂರಿನಲ್ಲಿ ಸ್ಫರ್ಧೆ ವಿಚಾರ
ವಿಜಯೇಂದ್ರ (Vijayayendra) ಎಲ್ಲಿಂದ ಸ್ಫರ್ಧೆ ಮಾಡ್ತಾರೋ ನನಗೆ ಗೊತ್ತಿಲ್ಲ, ಇನ್ನು ತಿರ್ಮಾನ ಆಗಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Vidhanasabha election) ಸ್ಪರ್ಧೆ ಮಾಡ್ತಾರೆ. ಎಲ್ಲಿಂದ ಏನು ಅಂತ ಇನ್ನು ತೀರ್ಮಾನ ಮಾಡಿಲ್ಲ , ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಖಚಿತ. ಗುಬ್ಬಿ (Gubbi) ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತಾರೆ ಅನ್ನೋ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಇದು ಮಹಾ ಜುಮ್ಮಾಗಳ ಸರ್ಕಾರ – ED ವಿಚಾರಣೆಯಿಂದ ಹೊರಬರುತ್ತಿದ್ದಂತೆಯೇ ಮೋದಿ ವಿರುದ್ದ ರಾಹುಲ್ ಗಾಂಧಿ ಟ್ವೀಟ್