ಕೇಂದ್ರದ (Central government) ಅಗ್ನಿಪಥ್ (Agnipath) ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು ನಿರುದ್ಯೋಗಿ (Unemployed) ಯುವಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ನಡೆಯುವಂತೆ ಮಾಡುವುದರೊಂದಿಗೆ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul gandhi) ಪ್ರಧಾನಿ ನರೇಂದ್ರ ಮೋದಿ (Narendra modi) ಅವರನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ದೇಶದ ವಿವಿಧೆಡೆ ಭಾರೀ ಪ್ರತಿಭಟನೆ ನಡೆದಿದೆ. ಏಕ ರೂಪ ಪಿಂಚಣಿ ಯೋಜನೆ ಇಲ್ಲ, ಎರಡು ವರ್ಷಗಳಿಗೆ ನೇರ ನೇಮಕಾತಿ ಇಲ್ಲ, ನಾಲ್ಕು ವರ್ಷಗಳ ನಂತರ ಭವಿಷ್ಯದಲ್ಲಿ ಭದ್ರತೆ ಇಲ್ಲ. ಸೇನೆಗಾಗಿ ಸರ್ಕಾರ ಗೌರವ ತೋರಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ಸಾಗುವಂತೆ ಮಾಡುವ ಮೂಲಕ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ : – SUPREME COURT – ತೆರವು ಕಾರ್ಯ ಪ್ರತೀಕಾರದ ಕ್ರಮವಾಗಬಾರದು: ಉತ್ತರ ಪ್ರದೇಶಕ್ಕೆ ಸುಪ್ರೀಂ ನೋಟಿಸ್