ಕಾಮಿಡಿ ದೊಡ್ಡಣನಾಗಿರೋ ಚಿಕ್ಕಣ್ಣ (Chikkanna) ಈಗ ಉಪಾಧ್ಯಕ್ಷನಾಗಿ ಬರ್ತಿದ್ದಾರೆ. ಹೆಸ್ರು ಚಿಕ್ಕಣ್ಣ ..ಆದ್ರೆ ಹಾಸ್ಯದಲ್ಲಿ ಮಾತ್ರದೊಡ್ಡಣ್ಣ..ಸ್ಯಾಂಡಲ್‌ವುಡ್‌ನ (Sandalwood) ಕಾಮಿಡಿ ಅಧ್ಯಕ್ಷನಾಗಿರೋ ಚಿಕ್ಕಣ್ಣನ ಕಾಮಿಡಿ ಕಾಮಿಕ್‌ಗೆ ನಕ್ಕು ನಲಿಯದ ಮನಸ್ಸುಗಳೇ ಇಲಾ. ಹಾಸ್ಯವನ್ನ ಪಸರಿಸುತ್ತಾ, ಎಲ್ಲರಿಗೂ ಆರೋಗ್ಯ ಹಂಚುತ್ತಿರುವ ನ್ಯಾಚುರಲ್ ಸ್ಟಾರ್ (Natural star) ಈಗ ನಾಯಕನಾಗ್ತಿದ್ದಾರೆ (Actor).
ಉಪಾಧ್ಯಕ್ಷನಾಗಿ (Upadyaksha) ಬೇರೆಯದ್ದೇ ರೀತಿಯಲ್ಲಿ ತೆರೆಯ ಮೇಲೆ ಬರೋಕೆ ರೆಡಿಯಾಗಿದ್ದಾರೆ ಚಿಕ್ಕಣ್ಣ. ಉಪಾಧ್ಯಕ್ಷ ಅಂದ್ರೆ ನಮ್ಗೆಲ್ಲಾ ಅಧ್ಯಕ್ಷ ಸಿನಿಮಾದ (Adyaksha movie) ಆ ಸೀನ್‌ಗಳು ನೆನಪಾಗುತ್ವೆ.. ಆ ಚಿತ್ರದಲ್ಲಿ ಶರಣ್ ಸ್ನೇಹಿತನಾಗಿ ಚಿ.ತೂ ಸಂಘದ ಉಪಾಧ್ಯಕ್ಷನಾಗಿ ಚಿಕ್ಕಣ್ಣ ಗಮನ ಸೆಳೆದಿದ್ರು..ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಅಂತಾನೇ ಫೇಮಸ್ ಆಗಿದ್ರು.. ಈಗ ಅದೇ ಟೈಟಲ್‌ನಲ್ಲಿ ಸಿನಿಮಾ ಬರ್ತಿದೆ. ಉಪಾಧ್ಯಕ್ಷ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.. ಆ ಮೂಲಕ ಚಿಕ್ಕಣ್ಣ ಹೀರೋ (Hero) ಆಗಿ ಎಂಟ್ರಿ ಕೊಡ್ತಿದ್ದಾರೆ.
ಉಮಾಪತಿ ಶ್ರೀನಿವಾಸ್ (Umapathy srinivas) ನಿರ್ಮಾಣದ ಉಪಾಧ್ಯಕ್ಷ ಸಿನಿಮಾಗೆ ಚಿಕ್ಕಣ್ಣ ಅವ್ರೇ ಹೀರೋ. ಚಂದ್ರಮೋಹನ್ (Chandra mohan) ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮೊದಲ ಹಂತದ ಚಿತ್ರೀಕರಣ ಮೈಸೂರು (Mysuru) ಸುತ್ತ ಮುತ್ತ ನಡೆಯಲಿದೆ. ಇಲ್ಲೂ ಸಹ ಚಿಕ್ಕಣ್ಣ ಪಕ್ಕಾ ಮಂಡ್ಯ (Mandya) ಶೈಲಿಯ ಭಾಷೆಯಲ್ಲೇ ಮಾತನಾಡಿ, ಪ್ರೇಕ್ಷಕರಿಗೆ ಕಿಕ್ ಕೊಡಲಿದ್ದಾರೆ.. ಇಷ್ಟು ದಿನ ಕಾಮಿಡಿ ನಟನಾಗಿ ಗಮನ ಸೆಳೆದಿದ್ದ ಚಿಕ್ಕಣ್ಣ ಈಗ ಹೀರೋ ಆಗಿ ಹೇಗೆ ಮೋಡಿ ಮಾಡ್ತಾರೋ ಅನ್ನೋ ಕುತೂಹಲವಂತೂ ಇದ್ದೇ ಇದೆ. ಇದನ್ನೂ ಓದಿ : – ಹಾಟ್ ಫೋಟೋ ಶೂಟ್ ನಲ್ಲಿ ಮಿಂಚಿದ ಪಾರುಲ್ ಯಾದವ್
ಚಿಕ್ಕಣ್ಣ ಒಂದು ರೀತಿಯ ಕಾಮಿಡಿ ಟಾನಿಕ್ ಇದ್ದ ಹಾಗೆ. ಚಿಕ್ಕಣ್ಣನಿಗೆ ಲೈಫ್ ಕೊಟ್ಟ ಸಿನಿಮಾ ಕಿರಾತಕ. ಯಶ್ ಜೊತೆಯಾಗಿ ನಟಿಸಿದ ಚಿಕ್ಕಣ್ಣ ತಮ್ಮ ಮಂಡ್ಯ ಲಾಂಗ್ಬೇಜ್‌ನಲ್ಲೇ ಜನರಿಗೆ ಹತ್ತಿರವಾಗಿ ಬಿಟ್ರು. ನಾಯಕನ ಗೆಳೆಯನಾಗಿ ಪಾತ್ರ ನಿರ್ವಹಿಸಿದ ಚಿಕ್ಕಣ್ಣ ಅಲ್ಲಿ ಕ್ಲಿಕ್ ಆದ್ರು. ಇದು ಚಿಕ್ಕಣ್ಣ ವೃತ್ತಿ ಬದುಕಿಗೆ ದೊಡ್ಡ ತಿರುವನ್ನೂ ತಂದು ಕೊಡ್ತು. ಆದ್ರೆ ಚಿಕ್ಕಣ್ಣನಿಗೆ ನೆಗೆಟೀವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದೆ..
ಆದ್ರೆ ಜನ ಅವ್ರನ್ನ ಕಾಮಿಡಿ ಪಾತ್ರದಲ್ಲಿ ಒಪ್ಪಿಕೊಂಡಿರುವುದರಿAದ ಆ ಪಾತ್ರದಲ್ಲೇ ಮುಂದುವರೆಯುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಚಿಕ್ಕಣ್ಣ ಹೆಸರು ಗಟ್ಟಿಯಾಗಿ ನೆಲೆನಿಲುತ್ತಿದೆ.. ಅವ್ರ ಅಭಿನಯಕ್ಕೆ ಮನಸೋತಿರುವ ಚಿತ್ರರಂಗ ಕೂಡ ಅವ್ರಿಗೆ ನ್ಯಾಚುರಲ್ ಸ್ಟಾರ್ ಎನ್ನುವ ಬಿರುದು ನೀಡಿದೆ. ಇದನ್ನೂ ಓದಿ : – TYSON – ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಜೊತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್