ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಸೆರೆ ಹಿಡಿಯುವಲ್ಲಿ ರಾಯಚೂರು ನಗರದ ನೇತಾಜಿ ಪೊಲೀಸರು ಯಶ್ವಸಿಯಾಗಿದ್ದಾರೆ.
ನಗರದ ಅಶೋಕನಗರದ ನಿವಾಸಿ ಆಂಜನೇಯ್ಯ ಕೊರವರು, ಬಾಪೂರ ಗ್ರಾಮದ ಮಹೇಶ ನಾಯಕ, ಬಾಲಕೃಷ್ಣ ಕೊರವರು, ಮಿಟ್ಟಿಮಲ್ಕಾಪುರ ಗ್ರಾಮದ ಭಗತ್ಸಿಂಗ್ ಕೊರವರು ಬಂಧಿತ ಬೈಕ್ ಕಳ್ಳರು. ಆರೋಪಿಗಳಿಂದ 10 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, 3.65 ಲಕ್ಷ ರೂಪಾಯಿ ಅಂದಾಜು ಮೌಲ್ಯದ ಬೈಕ್ಗಳಾಗಿವೆ.
ನಗರದ ಹೊರವಲಯದ ಬೊಳಮಾನದೊಡ್ಡಿ ರಸ್ತೆಯಲ್ಲಿ ನಂಬರ್ ಪ್ಲೇಟ್ಯಿಲ್ಲದ 2 ಬೈಕ್ಗಳಲ್ಲಿ ನಾಲ್ವರು ತೆರಳುತ್ತಿದ್ದರು. ಅದೇ ಸಮಯದಲ್ಲಿ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ತಡೆದಾಗ ನಾಲ್ವರು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಸಿನಿಮಯ ರೀತಿಯಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ನೇತಾಜಿ ಪಿಎಸ್ಐಗಳಾದ ಬಸವರಾಜ, ನರಸಮ್ಮ(ತನಿಖೆ), ಸಿಬ್ಬಂದಿಗಳಾದ ಗೌಸ್ ಪಾಷ, ಶ್ರೀನಿವಾಸ್, ಅಶೋಕ, ಮಲ್ಲಪ್ಪ, ರಮೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.