ಇಂಡಿಯನ್ ಪ್ರೀಮಿಯರ್ ಲೀಗ್ನ (IPL) 15ನೇ ಆವೃತ್ತಿಯಲ್ಲಿಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಗೆಲುವು ದಾಖಲು ಮಾಡುವ ತಂಡ ಫೈನಲ್ಗೆ ಪ್ರವೇಶ ಪಡೆದುಕೊಳ್ಳುವುದರ ಜೊತೆಗೆ ಗುಜರಾತ್ ಟೈಟನ್ಸ್ (Gujarat titans) ವಿರುದ್ಧ ಸೆಣಸಾಟ ನಡೆಸಲಿದೆ.
ಮೊದಲ ಕ್ವಾಲಿಫೈಯರ್ನಲ್ಲಿ ಸೋತ ರಾಜಸ್ಥಾನ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ರಾತ್ರಿ 7:30ಕ್ಕೆ ಪಂದ್ಯ ಆಯೋಜನೆಗೊಂಡಿದೆ.
ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ, ಫೈನಲ್ಗೆ ಲಗ್ಗೆ ಹಾಕುವ ಕನಸು ಕಾಣುತ್ತಿರುವ ಆರ್ ಸಿಬಿ ಪ್ರಶಸ್ತಿಗೆ ಕೇವಲ ಇನ್ನೆರಡು ಹೆಜ್ಜೆ ಬಾಕಿ ಇದೆ. ಸಂಜು ಸ್ಯಾಮ್ಸನ್ ಬಳಗಕ್ಕೂ ಈ ಪಂದ್ಯ ಪ್ರತಿಷ್ಠೆಯಿಂದ ಕೂಡಿದ್ದು, ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.
ಆರ್ಸಿಬಿ ( RCB ) ಬೌಲಿಂಗ್ ಕೂಡ ಉತ್ತಮವಾಗಿದೆ. ಹ್ಯಾಜಲ್ವುಡ್, ಹರ್ಷಲ್ ಪಟೇಲ್, ಹಸರಂಗ, ಸಿರಾಜ್ ಜೊತೆಗೆ ಮ್ಯಾಕ್ಸ್ವೆಲ್ ಕೂಡ ವಿಕೆಟ್ ಪಡೆದುಕೊಳ್ಳುತ್ತಿರುವುದು ತಂಡಕ್ಕೆ ಸಹಕಾರಿಯಾಗಿದೆ.ತಂಡದಲ್ಲಿರುವ ಡುಪ್ಲೆಸಿಸ್ (DUPLESIS) ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ (KOHLI) ಹಾಗೂ ಮಹಿಪಾಲ್ ಕಾರ್ತಿಕ್ ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ. ಇದನ್ನೂ ಓದಿ : – ಮೆಗಾ ಹರಾಜಿನಲ್ಲಿ ಕೈಬಿಟ್ಟಿದ್ದರೂ ತಮ್ಮ ಸಾಮರ್ಥ್ಯ ಬಹಿರಂಗಪಡಿಸಿದ ರಜತ್ ಪಾಟಿದರ್!