ರಾಜೀವ್ ಗಾಂಧಿ ಹಂತಕ ಪೆರಾರಿವಾಲನ್ 31 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಶಿಕ್ಷೆಗೆ ಒಳಗಾದವರಲ್ಲಿ ಒಬ್ಬನಾದ ಎಜಿ ಪೆರಾರಿವಾಲನ್ಗೆ ಸುಪ್ರೀಂಕೋರ್ಟ್ ಬಿಡುಗಡೆಯ ಭಾಗ್ಯ ನೀಡಿದೆ.

31 ವರ್ಷಗಳ ಕಾಲ ಕಂಬಿಯ ಹಿಂದೆ ಕಳೆದಿದ್ದ ಪೆರಾರಿವಾಲನ್ ಬಿಡುಗಡೆಯಾಗಲಿದ್ದಾನೆ. ಈ ತೀರ್ಪು, ನಳಿನಿ ಶ್ರೀಹರನ್ ಮತ್ತು ಆಕೆಯ ಪತಿ, ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ ಇತರೆ ಆರು ಮಂದಿ ಅಪರಾಧಿಗಳ ಬಿಡುಗಡೆಗೆ ಕೂಡ ದಾರಿ ಸುಗಮ ಮಾಡಿಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ :-  ಕೈಗೆ ಗುಡ್ ಬೈ ಹೇಳಿದ ಶಾಸಕ ಹಾರ್ದಿಕ್ ಪಟೇಲ್

“ತಮಿಳುನಾಡು ರಾಜ್ಯ ಸಂಪುಟ ತೆಗೆದುಕೊಂಡ ಅಂಶಗಳನ್ನು ಪರಿಗಣಿಸಿ, ಅದರ ಆಧಾರದಲ್ಲಿ ನ್ಯಾಯಪೀಠವು ಈ ನಿರ್ಧಾರ ತೆಗೆದುಕೊಂಡಿದೆ. “ಸತ್ಯ ಮತ್ತು ನ್ಯಾಯ ಎರಡೂ ನಮ್ಮ ಕಡೆಗಿವೆ. ಜನರ ಪ್ರೀತಿ ಮತ್ತು ಬೆಂಬಲ ಇಲ್ಲದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಪೆರಾರಿವಾಲನ್ ತೀರ್ಪಿನ ಬಳಿಕ ಹೇಳಿದ್ದಾನೆ.

ಹತ್ಯೆ ಸಂದರ್ಭದಲ್ಲಿ 19 ವರ್ಷದವನಾಗಿದ್ದ ಪೆರಾರಿವಾಲನ್, ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಲ್ಟಿಟಿಇಯ ಶಿವರಸನ್ಗಾಗಿ ಎರಡು 9 ವೋಲ್ಟ್ ಬ್ಯಾಟರಿಗಳನ್ನು ಖರೀದಿ ಮಾಡಿದ ಆರೋಪಿಯಾಗಿದ್ದಾನೆ.

rajiv gandhi assassination: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕನಿಗೆ ಜಾಮೀನು : 30  ವರ್ಷ ಜೈಲಿನಲ್ಲಿದ್ದ ಪೆರಾರಿವಾಲನ್‌ - rajiv gandhi assassination convict gets  bail, was in jail for over 32 years ...

ಈ ಬ್ಯಾಟರಿಗಳನ್ನು 1991ರಲ್ಲಿ ರಾಜೀವ್ ಗಾಂಧಿ ಅವರನ್ನು ಕೊಲ್ಲುವ ಬಾಂಬ್ಗಳಲ್ಲಿ ಬಳಸಲಾಗಿತ್ತು. 1998ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್ಗೆ ಮರಣದಂಡನೆ ವಿಧಿಸಿತ್ತು. ಮರು ವರ್ಷ ಸುಪ್ರೀಂ ಈ ತೀರ್ಪನ್ನು ಎತ್ತಿಹಿಡಿದಿದ್ದರೂ, 2014ರಲ್ಲಿ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.

ಇದನ್ನೂ ಓದಿ :- ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಯೊಳಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ ಪರಿಹಾರ – ಸಿಎಂ ಘೋಷಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!