ರಾಜ್ಯದ ವಿವಿಧೆಡೆ ಇಂದು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ರಾಮನಗರ ಜಿಲ್ಲೆಯ ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಮನೆ ಮೇಲೂ ಕೂಡ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ಮಾಡಿದೆ.
ಮಂಜುನಾಥ್ ಗೆ ಸೇರಿದ 6 ಕಡೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನ ನಿವಾಸ, ತುಮಕೂರಿನ ಫಾರ್ಮ್ ಹೌಸ್, ರಾಮನಗರ ಕಚೇರಿ, ರಾಮನಗರದ ಕ್ವಾಟ್ರಸ್ ಹಾಗೂ ಮಂಜುನಾಥ್ ಸ್ನೇಹಿತರ ಮನೆ ಮೇಲೂ ಕೂಡ ದಾಳಿ ನಡೆದಿದೆ. ಬೆಳ್ಳಂಬೆಳಿಗ್ಗೆ ರಾಮನಗರ ಎಸಿ ಕಛೇರಿಯಲ್ಲಿ ದಾಳಿ ನಡೆಸಿದ ಅಧಿಕಾರಗಳು ಸುಮಾರು 8 ಘಂಟೆಗೂ ಹೆಚ್ಚಿನ ಕಾಲ ತಪಾಸಣೆ ಮಾಡಿ ಅನೇಕ ಕಡತಗಳನ್ನು ಪರಿಶೀಲನೆ ನಡೆಸಿದರು.