ರಾಮನಗರ ನಗರಸಭೆ ಕಾಂಗ್ರೆಸ್ ಪಕ್ಷದ ಮಹಿಳಾ ಅಭ್ಯರ್ಥಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ನಗರಸಭೆಯ 4ನೇ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೀಲಾ ಗೋವಿಂದರಾಜು (42) ಕೋವಿಡ್ ಗೆ ಬಲಿಯಾದ ದುರ್ದೈವಿ.
ನಗರಸಭೆ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬೀಳಲಿದ್ದು, ಒಂದು ದಿನ ಮುಂಚಿತವಾಗಿಯೇ ಬರುವ ಮುನ್ನವೇ ಲೀಲಾ ಗೋವಿಂದರಾಜು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಾಮನಗರ ನಗರಸಭೆಯ ಚುನಾವಣೆಯ ಮತ ಏಣಿಕೆ ಕಾರ್ಯ ಶುಕ್ರವಾರ ನಡೆಯಲಿದೆ. ಇದೇ ತಿಂಗಳ 27ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು.