ಭಾರೀ ಜನಪ್ರಿಯವಾಗುತ್ತಿರುವ ಬಿಟ್ ಕಾಯಿನ್ ಮಾದರಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸಿದೆ.
ಸರಕಾರ ಮತ್ತು ಬ್ಯಾಂಕ್ ಗಳ ವ್ಯಾಪ್ತಿಗೆ ಬಾರದೇ ಖಾಸಗಿಯಾಗಿ ನಗದು ರೂಪದಲ್ಲಿ ವಹಿವಾಟು ಮೂಲಕ ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ನಗದು ಚಲಾವಣೆಗೆ ತರಲಿದೆ.
ಈಗ ಚಲಾವಣೆ ಇರುವ ನಗದು ಮಾದರಿಯಲ್ಲೇ ಡಿಜಿಟಲ್ ಕರೆನ್ಸಿಯನ್ನು ಆರ್ ಬಿಐ ಜಾರಿಗೆ ತರಲಿದೆ. ಈ ಕರೆನ್ಸಿ ಮೂಲಕ ಯಾವುದೇ ಮಧ್ಯವರ್ತಿ ಹಾಗೂ ಕಂಪನಿಗಳ ನೆರವಿಲ್ಲದೇ ಹಣದ ವಹಿವಾಟು ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಅಕ್ರಮ ವಹಿವಾಟಿಗೆ ಬಳಸಲಾಗುತ್ತಿರುವ ಡಿಜಿಟಲ್ ಕರೆನ್ಸಿಗಳಾದ ಬಿಟ್ ಕಾಯಿನ್ ಬದಲಿಗೆ ತಮ್ಮದೇ ಆದ ಡಿಜಿಟಲ್ ಕರೆನ್ಸಿ ಜಾರಿಗೆ ತರುವ ಬಗ್ಗೆ ಗಮನ ಹರಿಸಲಾಗಿದೆ ಎಂದು ಹೇಳಿದ್ದರು.