ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ (H.D REVANNA )ಮತದಾನ ಮಾಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K SHIVKUMAR) ಅವರಿಗೆ ಮತ ಪತ್ರವನ್ನು ತೋರಿಸಿದ್ದಕ್ಕೆ ಬಿಜೆಪಿ (BJP ) ಆಕ್ಷೇಪವೆತ್ತಿದೆ.
ಮತದಾನದ ಸಂದರ್ಭದಲ್ಲಿ ರೇವಣ್ಣ ಅವರು ಮತಪತ್ರವನ್ನು ವ್ಯಂಗ್ಯವಾಗಿ ಡಿಕೆಶಿಗೆ ತೋರಿಸಿದ್ದಾರೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಅನ್ನೋದು ಬಿಜೆಪಿ ಆಕ್ಷೇಪವಾಗಿದೆ. ಇದನ್ನೂ ಓದಿ : – ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಿಟಿ ರವಿ !
ಮತಗಟ್ಟೆಯಲ್ಲೇ ಬಿಜೆಪಿ ಇದಕ್ಕೆ ಆಕ್ಷೇಪ ಎತ್ತಿದ್ದು, ಇದೀಗ ಅಧಿಕೃತವಾಗಿ ಹೀಗಾಗಿ ಚುನಾವಣಾಧಿಕಾರಿಗೆ ಸತೀಶ್ (SATHISH REDDY ) ರೆಡ್ಡಿ ದೂರು ನೀಡಿದ್ದಾರೆ. ಈ ಮತವನ್ನ ಅನೂರ್ಜಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : – ಜೆಡಿಎಸ್ ಕಾಂಗ್ರೆಸ್ ಏನೇ ಪ್ರಯತ್ನ ಮಾಡಿದರೂ ಗೆಲುವು ಕಷ್ಟ – ಯಡಿಯೂರಪ್ಪ