ಪಶ್ಚಿಮ ಘಟ್ಟಗಳ (western ghat) ಸಾಲಿನಲ್ಲಿ ರಾತ್ರಿಯಿಡೀ ಭಾರಿ ಮಳೆ (Rain) ಸುರಿದು ರಸ್ತೆ ಕುಸಿದಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತಾತ್ರೇಯ ಪೀಠದ (Dattatreya peetha) ಮಾರ್ಗದಲ್ಲಿ ಸಂಭವಿಸಿದೆ.
ಮಳೆ ಮುಂದುವರೆದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ. ದಿನನಿತ್ಯ ದತ್ತಾತ್ರೇಯ ಪೀಠಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮೊದಲ ಮಳೆಗೆ ಚಂದ್ರದ್ರೋಣ ಪರ್ವತ (Chandradrona mountain) ಪ್ರದೇಶದಲ್ಲಿ ರಸ್ತೆ ಕುಸಿತವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಯಿಂದಾಗಿ ಕುಸಿದ ರಸ್ತೆಯಲ್ಲೇ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತಿವೆ. ಇದನ್ನೂ ಓದಿ : – ED ಕಡೆ ಹೋಗೋ ಪ್ರತಿಭಟನೆ ಇನ್ನೊಂದು ದಿನ ತಿಹಾರ್ ಜೈಲಿಗೂ ಹೋಗಬಹುದು- ಅಶ್ವಥ್ ನಾರಾಯಣ್