ಎಂ ಐ ಮೊಬೈಲ್ ಶೋರೂಂನಲ್ಲಿ (MI Mobile showroom) ಕಳ್ಳ ಮೊಬೈಲ್ ಮತ್ತು ಹಣ ಕದ್ದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದ ಬಿಬಿ ರಸ್ತೆಯ ಎಂ ಐ ಸರ್ವೀಸ್ ಸೆಂಟರ್ ನಲ್ಲಿ ನಡೆದಿದೆ.
ಮೊಬೈಲ್ ಶೋರೂಂನಲ್ಲಿ ನೌಕರನೆ ತಾನು ಕೆಲಸ ಮಾಡುವ ಜಾಗದಲ್ಲಿ ಕಳ್ಳತನ ಮಾಡಿದ್ದಾನೆ. ದೊಡ್ಡಬಳ್ಳಾಪುರ ಮೂಲದ ರಾಘವೇಂದ್ರ ಎನ್ನುವಾತನಿಂದ ಕೃತ್ಯ ನಡೆದಿದೆ. ಸುಧೀರ್ ಎಂಬುವವರಿಗೆ ಎಂ ಐ ಶೋರೂಂ ಹಾಗೂ ಸರ್ವೀಸ್ ಸೆಂಟರ್ ಸೇರಿದೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಗಳು ಹಾಗೂ 30 ಸಾವಿರ ಹಣ ಕದ್ದು ಪರಾರಿಯಾಗಿದ್ದಾನೆ. ಇದನ್ನೂ ಓದಿ : – ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ರಾಮದಾಸ್ ನಡುವೆ ಪೈಪೋಟಿ