ಮೈಸೂರಿನ ಹೋಟೆಲ್ ಗೆ ಬಂದ ರೋಬೊ: ಗ್ರಾಹಕರು ಖುಷ್!

ಯಂತ್ರ ಮಾನವರು ಒಂದೊಂದೇ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹೊಟೇಲ್ ಗಳಲ್ಲಿ ಅದರಲ್ಲೂ ವಿದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಯಂತ್ರ ಮಾನವರು ಇದೀಗ ಮೈಸೂರಿಗೂ ಕಾಲಿಟ್ಟಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರ್ನಾಟಕದ ಸಾಂಸ್ಕೃತಿಕ ವಸ್ತ್ರ ಸೀರೆ ಧರಿಸಿದ ಹೆಣ್ಣು ವೇಷಧಾರಿ ರೋಬೊ ಹೊಟೇಲ್ ನಲ್ಲಿ ಸರ್ವಿಸ್ ನೀಡುತ್ತಿದ್ದು, ಇದರ ಕಾರ್ಯ ವೈಖರಿ ಕಂಡು ಗ್ರಾಹಕರು ಫುಲ್ ಫಿದಾ ಆಗಿದ್ದಾರೆ.

ಮುಂಬೈ, ಹೈದರಾಬಾದ್‌, ದೆಹಲಿ ಸೇರಿದಂತೆ ಹಲವು ನಗರಗಳ ಐಷಾರಾಮಿ ಹೋಟೆಲ್‌ಗಳಲ್ಲಿ ರೋಬೋಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಣ್ಣಪುಟ್ಟ ಹೋಟೆಲ್‌ಗಳಲ್ಲಿ  ರೋಬೋಗಳ ಕಾರ್ಯನಿರ್ವಹಣೆ ಕಡಿಮೆ. ಆದ್ರೆ, ಮೈಸೂರಿನ ಸಿದ್ಧಾರ್ಥ ಹೋಟೆಲ್‌ನ ಮಾಲೀಕರು, ಗ್ರಾಹಕರನ್ನು ಸೆಳೆಯುವ ಸಲುವಾಗಿ ರೋಬೋ ತರಿಸಿದ್ದು, ಅದಕ್ಕೆ ಕರ್ನಾಟಕದ ಮಹಿಳೆಯರು ಧರಿಸುವಂತಹ ಸೀರೆ ಧರಿಸಿ ಸೇವೆ ಒದಗಿಸುತ್ತಿದ್ದಾರೆ.

ಕೆಂಪು ಸೀರೆಯುಟ್ಟ ರೋಬೋ ಪ್ರೇಮಿಗಳ ದಿನದಿಂದ ಸಿದ್ಧಾರ್ಥ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರನ್ನು ಸೆಳೆಯುವ ಪ್ರಯತ್ನದಿಂದ ದೆಹಲಿಯಿಂದ ಈ ರೋಬೋವನ್ನು ಹೋಟೆಲ್‌ ಮಾಲೀಕರು ತರಿಸಿಕೊಂಡಿದ್ದಾರೆ. ರೋಬೋ ಆರ್ಡರ್‌ ಮಾಡಿದ್ದನ್ನು ಗ್ರಾಹಕರಿಗೆ ಸಪ್ಲೈ ಮಾಡುತ್ತಿದೆ. ಇದನ್ನು ನೋಡಿ ಗ್ರಾಹಕರು ಖುಷಿಯಾಗಿದ್ದಾರೆ.

ಗ್ರಾಹಕರು ರೋಬೋ ನೋಡಿ ಖುಷಿಯಾಗಿದ್ದು ಅಲ್ಲದೇ ಅದರ ಜೊತೆ ಸೆಲ್ಫಿ ಕೂಡಾ ತೆಗೆದುಕೊಳ್ಳುತ್ತಿದ್ದಾರೆ. ರೋಬೋ ಕಾರಣಕ್ಕೆ ಈ ಹೋಟೆಲ್‌ ಈಗ ಆಕರ್ಷಣೆಯ ಕೇಂದ್ರವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!