ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಣೆ ಮಾಡಿದ ಘಟನೆ ಗದಗ (gadag ) ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ವ್ಯಾಪ್ತಿಯಲ್ಲಿ ನಡಿದಿದೆ.
ಇರುವೆ ಸೇತುವೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು ತೆರಳಿದ್ದರು. ಇವರು ಪ್ರವಾಹದಲ್ಲಿ ಸಿಲುಕಿದ್ದು ರೋಣ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹಗ್ಗದ ಸಹಾಯದಿಂದ ಕಾರ್ಮಿಕರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರೋಣ ತಹಶೀಲ್ದಾರ್ ವಾಣಿ ಉಣಕಿ ನೇತೃತ್ವದಲ್ಲಿ ಹಡಗಲಿ ಗ್ರಾಮದ ಯಲ್ಲಪ್ಪ, ಅರುಣ ತಳವಾರ, ಪರಶುರಾಮ ಹಾಗೂ ಸಿದ್ದು ಅವರನ್ನ ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಇದನ್ನೂ ಓದಿ : – ನಿರಂತರ ಮಳೆ ಹಿನ್ನೆಲೆ- ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ