ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇದೇ ತಿಂಗಳ 15 ನೇ ತಾರೀಖಿನಿಂದ ಪ್ರತಿ ಭಾನುವಾರ ಯೋಗಾಭ್ಯಾಸ ಕಾರ್ಯಕ್ತಮ ನಡೆಸಲಾಗುವುದು ಎಂದು ಶ್ವಾಸಗುರು ವಚನಾನಂದ (VACHANANAND ) ಶ್ರೀ ಹೇಳಿದ್ರು.
ವಿಜಯನಗರ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಿಶ್ವವಿಖ್ಯಾತ ಹಂಪಿಯಲ್ಲಿ ಈ ಬಾರಿ ಯೋಗ ದಿನಾಚರಣೆ ಹಮ್ಮಿಕೊಂಡಿದ್ದು, ಮೇ.15 ಕ್ಕೆ ವಿಜಯವಿಠಲ ದೇವಸ್ಥಾನದ ಆವರಣ, 22 ರಂದು ಬಡವಿಲಿಂಗ ಉಗ್ರನರಸಿಂಹ ಆವರಣ, 29 ರಂದು ಮಹಾನವಮಿ ದಿಬ್ಬದ ಆವರಣ, ಜೂನ್. 05 ರಂದು ಆನೆಸಾಲು ಒಂಟೆ ಸಾಲು, 12 ರಂದು ಕಮಲಮಹಲ್ ಆವರಣ, 19 ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ದಿನವಾದ 21ರಂದು ಎದುರುಬಸವಣ್ಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಅವರು ತಿಳಿಸಿದ್ರು. ಇದನ್ನೂ ಓದಿ : – ಬಿಜೆಪಿಯವರು ಯಾಕೆ ಮುಸ್ಲಿಮರ ಓಲೈಕೆ ಮಾಡಬೇಕು.? – ಪ್ರಮೋದ್ ಮುತಾಲಿಕ್
ಇದರ ಜೊತೆಗೆ ಯೋಗ ರಥಯಾತ್ರೆ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದು ಪ್ರತಿ ಗ್ರಾಮೀಣ ಪ್ರದೇಶಕ್ಕೆ ತೆರಳಿ ಯೋಗ ಜಾಗೃತಿ ಮೂಡಿಸಲಾಗುವುದು ಎಂದರು. ಯೋಗಯುಕ್ತ ರೋಗಮುಕ್ತ ರಾಜ್ಯ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ ಅವರು, ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಚಿವರಾದ ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸಚಿವರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ..ಇನ್ನು ನಾಡನ್ನು ಏನ್ ಕಟ್ತಾರೆ? – ನಳೀನ್ ಕುಮಾರ್ ಕಟೀಲ್