ವಿಜಯನಗರ ಜಿಲ್ಲೆಯ ಸಲಾದಹಳ್ಳಿಯಲ್ಲಿ ಅನ್ಯ ಜಾತಿಯಲ್ಲಿ ಪ್ರೇಮಿಸಿದ್ದಕ್ಕೆ ಪ್ರೇಮಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಮಿಗಳಿಬ್ಬರ ಭೀಕರ ಹತ್ಯೆ ನಡೆಸಿದ್ದ ಐವರನ್ನು ಬಂಧಿಸಿರುವ ಪೊಲೀಸರು ಎಲ್ಲಾ ಆರೋಪಿಗಳನ್ನ ಇಂದು ವಿಜಯಪುರ ಆಟ್ರಾಸಿಟಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪ್ರಕರಣ ಆರೋಪಿಗಳಾದ ಲಾಳೇಸಾಬ್ ವಲ್ಲಿಬಾಯಿ, ಅಲ್ಲಾ ಪಟೇಲ್, ರಫೀಕ್, ಯುವತಿ ಅಣ್ಣ ದಾವಲ್‌ಪಟೇಲ್, ಯುವತಿ ತಂದೆ ಬಂದಗಿ ಸಾಬ್ ಅವರಿಗೆ ಜುಲೈ 9ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯದ ಆದೇಶಿಸಿದೆ.
ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣ ಕಲಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.