ನಟ ಡಾ. ವಿಷ್ಣುವರ್ಧನ್ ಪಾಠ ಕಲಿತ ಕಲಿತ ಕನ್ನಡ ಶಾಲೆ ಹಾಗೂ ಬೆಂಗಳೂರಿನ ಮೊದಲ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಶಾಲೆಯನ್ನ ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧರಿಸಿದ್ದು, ನಟ-ನಟಿಯರು ಇದರ ಉಳಿವಿಗೆ ಪಣ ತೊಟ್ಟಿದ್ದಾರೆ.
ನಿನ್ನೆ ತಾನೇ ನಟಿ ಪ್ರಣೀತಾ ಈ ಶಾಲೆಯ ಬಗ್ಗೆ ಟ್ವೀಟ್ ಮಾಡಿ, ಪ್ರಣೀತಾ ಫೌಂಡೇಶನ್‍ನಿಂದ ಸಹಾಯ ಮಾಡುತ್ತೇನೆ. ಈ ಶಾಲೆ ಉಳಿಸುವುದಕ್ಕೆ ನೀವೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದರು. ಇದೀಗ ಆ ಶಾಲೆ ಉಳವಿಗೆ ನಟ-ನಿರ್ದೇಶಕ ರಿಷಭ್ ಶೆಟ್ಟಿ ಕೂಡ ನಿಂತಿದ್ದಾರೆ.
ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ ವಿಷ್ಣುವರ್ಧನ್ ಅವರು ಓದಿರುವ ಸಂಸ್ಥೆಯು ಮುಚ್ಚುತ್ತಿರುವುದು ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆಂದಿರುವ ರಿಷಭ್, ಈ ವಿಚಾರವಾಗಿ ಮೊದಲು ಧ್ವನಿ ಎತ್ತಿರುವ ಪ್ರಣೀತಾಗೆ ಧನ್ಯವಾದ ತಿಳಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈಸ್ಕೂಲ್ 150 ವರ್ಷಗಳ ಇತಿಹಾಸ ಹೊಂದಿರುವ ಶಾಲೆ. ಸದ್ಯ ವಿದ್ಯಾರ್ಥಿಗಳಿಲ್ಲದೆ ಬಣಗುಡುತ್ತಿದ್ದು, ಶಾಲೆ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ.