ಬೆಂಗಳೂರು : ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೊರೊನಾದಿಂದ ನಾನು ಸತ್ತರೆ ಸದಕ್ಕೆ ನೀವೇ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ದ ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಫೇಸ್ಬುಕ್ಲೈವ್ ನಲ್ಲಿ ಕಿಡಿಕಾರಿದ ಅವರು, ರಾಜ್ಯದಲ್ಲಿ ಕೊರೊನಾದಿಂದ ಮೃತಟ್ಟಿರುವ ಪ್ರತಿಯೊಬ್ಬರು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಹಾಗೂ ವಿಜಯೇಂದ್ರ ಅವರೇ ನೇರ ಕಾರಣ ಎಂದರು.
ಕೊರೊನಾ ನಿಯಂತ್ರಣ ಮಾಡುವುದಕ್ಕೆ ನಿಮಗೆ ಒಂದೂವರೆ ವರ್ಷ ಬೇಕಾ..? ನಿಯತ್ತಾಗಿ ಕೆಲಸ ಮಾಡಿ ಜನರ ಪ್ರಾಣ ಉಳಿಸಿ ಸ್ವಾಮಿ ಅಂತ ಕೈಮುಗಿದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಬಿಂಬಿಡದೆ ಕಾಡುತ್ತಿದೆ. ಹಲವಾರು ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳಿಗೆ ಕೊರೊನಾ ಸೋಂಕಿ ತಗುಲಿ ಆಸ್ಪತ್ರೆಗೆ ಸೇರಿದ್ದಾರೆ. ಇದೀಗ ನಟ ಗುರುಪ್ರಸಾದ್ಗೂ ಕೊರೊನಾ ಸೋಂಕು ತಗುಲಿದೆ.