ಬೆಂಗಳೂರು : ಮಹಾಮಾರಿ ಕೋವಿಡ್ ಗೆ ಕನ್ನಡ ಚಿತ್ರರಂಗದ ಯುವ ಪೀಳಿಗೆಯಿಂದ ಹಿಡಿದು ಮಹಾನ್ ಸಾಧಕರು ಬಲಿಯಾಗುತ್ತಿದ್ದಾರೆ. ಈ ಸಾಲಿಗೆ 80ರ ದಶಕದ ಹಿಟ್ ಚಿತ್ರಗಳ ನಿರ್ದೇಶಕ 83 ವರ್ಷದ ತಿಪಟೂರು ರಘು ಸೇರ್ಪಡೆಗೊಂಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಘು ಕೊರೊನಾ ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
80ರ ದಶಕದಲ್ಲಿ ಸಿನಿಮಾ ರಂಗದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ತಿಪಟೂರು ರಘು ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿ ಹೆಸರಾಗಿದ್ದರು. ವರನಟ ಡಾ.ರಾಜ್ ಕುಮಾರ್ ಅಭಿನಯದ ನಾಗಪೂಜಾ ಸಿನಿಮಾ ಮೂಲಕ ಸಹ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದ ತಿಪಟೂರು ರಘು, ಊರ್ವಶಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು.
ನಂತರ ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ ಬಿರುಗಾಳಿ, ಬೆಟ್ಟದ ಹುಲಿ, ನಾಗರಪೂಜೆ ಸೇರಿದಂತೆ 16ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.1984 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ `ಬೆಂಕಿ ಬಿರುಗಾಳಿ’ ಚಿತ್ರವು ಅವರಿಗೆ ಅಪಾರ ಹೆಸರು ತಂದು ಕೊಟ್ಟಿತು. ನಿರ್ದೇಶನವಲ್ಲದೆ ಕೆಲವು ಚಿತ್ರಗಳಲ್ಲಿ ರಘು ನಟಸಿದ್ದರು.