ಸರಿಗಮ ಖ್ಯಾತಿಯ ಗಾಯಕ ಸುಬ್ರಮಣಿ ಅವರ ಪತ್ನಿ ಕೋವಿಡ್​ಗೆ ಬಲಿ

ಬೆಂಗಳೂರು: ಕನ್ನಡ ಸರಿಗಮಪ ಖ್ಯಾತಿಯ ಗಾಯಕ, ಪೊಲೀಸ್​ ಹೆಡ್ ಕಾನ್ಸ್​​ಸ್ಟೇಬಲ್​​​​ ಸುಬ್ರಮಣಿ ಅವರ ಪತ್ನಿ ಜ್ಯೋತಿ ಕೊರೊನಾ ವೈರಸ್​​ ನಿಂದ ಸಾವನ್ನಪ್ಪಿದ್ದಾರೆ.

ಸುಬ್ರಮಣಿ ಅವರ ಪತ್ನಿ ಜ್ಯೋತಿ ಅವರಿಗೆ ಕಳೆದ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಕಳೆದ ಎರಡು ದಿನಗಳ ಹಿಂದೆ ಜ್ಯೋತಿ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಓಡಾಡಿದರೂ ಕೂಡ ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದಾರೆ.

ಹೊಸಕೋಟೆಯ ಸಿಲಿಕಾನ್ ಸಿಟಿಯ ಆಸ್ಪತ್ರೆಗೆ ಜ್ಯೋತಿಯವರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸುಬ್ರಮಣಿ ಅವರ ಪತ್ನಿ ನಿನ್ನೆ (ಮೇ 10) ಸಾವನ್ನಪ್ಪಿದ್ದಾರೆ.

ಸುಬ್ರಮಣಿ ಅವರು ಕೋಲಾರ ಮೂಲದವರಾಗಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!