ಕಳೆದ 5 ವರ್ಷಗಳಲ್ಲಿ ಶೂನ್ಯ ಬ್ಯಾಲೆನ್ಸ್ ಹೊಂದಿದ್ದಕ್ಕಾಗಿ ಗ್ರಾಹಕರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 300 ಕೋಟಿ ರೂ. ಶುಲ್ಕ ಸಂಗ್ರಹಿಸಿದೆ ಎಂದು ಐಐಟಿ ಬಾಂಬೆ ಸಮೀಕ್ಷೆ ಹೇಳಿದೆ.
ಉಳಿತಾಯ ಖಾತೆ ಯೋಜನೆಯಡಿ ಬ್ಯಾಂಕ್ ನಲ್ಲಿ ಖಾತೆ ತೆರೆದರೂ ಶೂನ್ಯ ಠೇವಣಿ ಹೊಂದಿದ್ದಕ್ಕಾಗಿ ದಂಡದ ರೂಪದಲ್ಲಿ ಬ್ಯಾಂಕ್ ಗಳು ಶುಲ್ಕ ವಸೂಲು ಮಾಡುತ್ತಿವೆ. ಎಸ್ ಬಿಐ ಪ್ರತಿ ಬಾರಿ ಹಣ ಡ್ರಾ ಅಥವಾ ಡೆಬಿಟ್ ವರ್ಗಾವಣೆ ಮಾಡಿದಾಗ ಗ್ರಾಹಕರಿಗೆ 17.70 ರೂ. ಶುಲ್ಕ ವಸೂಲು ಮಾಡುತ್ತಿದೆ ಎಂದು ಬಿಎಸ್ಬಿಡಿಎ ತಿಳಿಸಿದೆ.
ಉಳಿತಾಯ ಖಾತೆದಾರರಿಂದ ಎಸ್ ಬಿಐ ಕನಿಷ್ಠ ಠೇವಣಿ ಹೊಂದಿಲ್ಲದ ಕಾರಣಕ್ಕಾಗಿ 300 ರೂ. ಕೋಟಿ ರೂ. ಶುಲ್ಕ ವಸೂಲು ಮಾಡಿದೆ. ಭಾರತದ ಅತ್ಯಂತ ದೊಡ್ಡ ಪಬ್ಲಿಕ್ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ 9.9 ಕೋಟಿ ರೂ. ಇದೇ ಅವಧಿಯಲ್ಲಿ ಸಂಗ್ರಹಿಸಿದೆ ಎಂದು ತಿಳಿಸಿದೆ.
ಎಸ್ ಬಿಐ 2018-19ರ ಅವಧಿಯಲ್ಲಿ 72 ಕೋಟಿ ರೂ., 2019-20ರ ಅವಧಿಯಲ್ಲಿ 158 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಬಿಎಎಸ್ ಬಿಡಿಎ ತಿಳಿಸಿದೆ.