ಮೇ 16 ರಿಂದಲೇ ಶಾಲೆ ಮತ್ತೆ ಪುನರಾರಂಭ – ಪಠ್ಯ ಪುಸ್ತಕದ ಕೊರತೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇದೇ ತಿಂಗಳು 16 ರಿಂದಲೇ ಶಾಲೆ ಮತ್ತೆ ಪುನರಾರಂಭ ಆಗ್ತಿದೆ, ಆದ್ರೆ ಮಕ್ಕಳಿಗೆ ಮುಖ್ಯವಾಗಿ ಅತ್ಯವಿರುವ ಪಠ್ಯಪುಸ್ತಕ ನೀಡದೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಸಮಯಕ್ಕೆ ಸರಿಯಾಗಿ ಪುಸ್ತಕ ನೀಡದೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನೇನು ಶಾಲೆ ಆರಂಭಕ್ಕೆ 5 ದಿನ ಬಾಕಿ ಇದೆ. ಆದ್ರೂ ಸಹ ಮಕ್ಕಳಿಗೆ ಕೊಡುವ ಪುಸ್ತಕಗಳು ಶಾಲೆಗಳಿಗೆ ತಲುಪಿಲ್ಲ.

Government Schemes for School Education that Parents Should Know

ಶೇ.45ರಷ್ಟು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲ. ಸುಮಾರು 21 ಸಾವಿರ ಖಾಸಗಿ ಶಾಲೆಗೆ ಒಂದು ಪುಸ್ತಕವೂ ಸಿಕ್ಕಿಲ್ಲ. 6 ತಿಂಗಳ ಹಿಂದೆಯೇ ದುಡ್ಡು ಪಡೆದಿದ್ದರೂ ಪಠ್ಯ ಪೂರೈಸಿಲ್ಲ ಅಂತ ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಇಲಾಖೆ ನಡೆಗೆ ಕಿಡಿಕಾರಿದೆ.

Cabinet approves new Integrated Scheme for School Education

ಇನ್ನೊಂದು ಕಡೆ ಕೊವಿಡ್ ಕಾರಣಕ್ಕೆ ಮಕ್ಕಳಿಗೆ ಕಲಿಕೆಯಾಗಿಲ್ಲ ಅಂತಾ ಶಿಕ್ಷಣ ಇಲಾಖೆ ಎರಡು ವಾರಗಳ ಕಾಲ ಬೇಸಿಗೆ ರಜೆಗೆ ಕಡಿವಾಣ ಹಾಕಿ 16 ರಿಂದಲೆ ಶಾಲೆ ಆರಂಭಕ್ಕೆ ಮುಂದಾಗಿದೆ.. ಆದರೆ ಪಠ್ಯ ಪುಸ್ತಕಗಳು ಇಲ್ಲದೆ ಶಾಲೆ ನಡೆಸುವುದು ಹೇಗೆ ಎನ್ನುವ ಗೊಂದಲದಲ್ಲಿ ಶಾಲೆಗಳು ಇವೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಹಿಂದೆ ಉಳಿಯುವ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : – ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ದಾಳಿ ಪ್ರಕರಣ – ತಪ್ಪಿತಸ್ಥರ ಸುಮ್ಮನೆ ಬಿಡಲ್ಲ ಎಂದ ಸಿಎಂ ಭಗವಂತ್ ಮಾನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!