ಬೆಂಗಳೂರು: ವ್ಯಾಕ್ಸಿನೇಶನ್ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಶೀಲ್ಡ್ ಅಂತರದಲ್ಲಿ ಬದಲಾವಣೆ ಮಾಡಲಾಗಿದೆ. ನಾಲ್ಕು ವಾರದಿಂದ 12 ವಾರಕ್ಕೆ ಅಂತರ ಹೆಚ್ಚಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಕೋವಿಡ್ ಟಾಸ್ಕ್ಪೋರ್ಸ್ ಸಮಿತಿಯ ಮುಖ್ಯಸ್ಥರಾಗಿರುವ ಡಿಸಿಎಂ ಅಶ್ವತ್ಥನಾರಾಯಣ ಅವರು ವಿಧಾನಸೌಧದಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಕೋವಿಡ್ ಕಾರ್ಯಪಡೆ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳು :
ಕೋವಿಶೀಲ್ಡ್ ಫಸ್ಟ್ ಡೋಸ್ ಹಾಗೂ ಸೆಕೆಂಡ್ ಡೋಸ್ ಅಂತರ ಬದಲಾಯಿಸಲಾಗಿದೆ 12 ರಿಂದ16 ವಾರಕ್ಕೆ ಹೆಚ್ಚಿಸಲಾಗಿದೆ.
12 ವಾರದಿಂದ 16 ವಾರ ಫುಲ್ ಫಿಲ್ ಆದವರಿಗೆ ಮಾತ್ರ ಸೆಕೆಂಡ್ ಡೋಸ್ ಕೊಡಲಾಗುತ್ತದೆ.
45 ಮೇಲ್ಪಟ್ಟ ನಾಗರೀಕರಿಗೆ ಇಂದಿನಿಂದ ಫಸ್ಟ್ ಡೋಸ್ ಕೊಡಲಾಗುತ್ತಿದೆ. ಕೋವ್ಯಾಕ್ಸಿನ್ ವಿಚಾರದಲ್ಲಿ ಸೆಕೆಂಡ್ ಡೊಸ್ ಪೂರ್ಣ ಆದ ನಂತರ ಮತ್ತೆ ಮೊದಲ ಡೋಸ್ ಕೊಡಲಾಗುತ್ತದೆ.
18-44 ವಯಸ್ಸಿನವರಿಗೆ ಆ್ಯಪ್ ಅಭಿವೃದ್ಧಿ ಮಾಡಬೇಕು ಅದನ್ನು ಕೋವಿನ್ ಆಪ್ ಜೊತೆ ಜೋಡಿಸಿದ ನಂತರ ಅವರಿಗೆ ಲಸಿಕೆ ನೀಡಲಾಗುತ್ತದೆ.ಲಸಿಕೆ ಕೊಡುವುದನ್ನು ಆಸ್ಪತ್ರೆಗಳಿಂದ ಹೊರಗೆ ಮಾಡಲು ತೀರ್ಮಾನ.
ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿ- ಪ್ರತಿ ಬೆಡ್ ಗೆ ಗರಿಷ್ಠ 10 ರೂಪಾಯಿ ನೀಡಲು ತೀರ್ಮಾನ. ಸರ್ಕಾರಿ ಆಸ್ಪತ್ರೆಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ಕ್ರಮ
ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ DRDO ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲು ತೀರ್ಮಾನ. ಇದಕ್ಕೆ 6ರಿಂದ 10 ಸಾವಿರ ಆಗುತ್ತದೆ.
ಆಮ್ಲಜನಕ ಬಾಟ್ಲಿಂಗ್ ಯುನಿಟ್ ಗಳನ್ನು ಕೆಲವು ಕಡೆ ಸ್ಥಾಪಿಸುವುದು.
ಲಸಿಕೆ- ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 843 ಕೋಟಿ ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ.
ಲಸಿಕೆಯನ್ನು ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಅಗತ್ಯ ಸೇವೆ ನೀಡುವವರಿಗೆ ಕೊಡಬೇಕು ಅಂತ ಯೋಚಿಸಲಾಗಿದೆ. ಜನ ಸಂಪರ್ಕ ಇರುವ ವ್ಯಕ್ತಿಗಳಿಗೆ ಆದ್ಯತೆಯಲ್ಲಿ ನೀಡಬೇಕು ಎಂದು ನಿಶ್ಚಯ ಮಾಡಲಾಗಿದೆ.
ಟೆಲಿಕಾಂ, ಶವ ಸಂಸ್ಕಾರ ಮಾಡುವವರು, ಬೀದಿ ಬದಿ ವ್ಯಾಪಾರಿಗಳಿಗೆ ಮೊದಲು ನೀಡಬೇಕು ಲಸಿಕೆಯನ್ನು ಇನ್ಮುಂದೆ ಶಾಲಾ ಕಾಲೇಜುಗಳಲ್ಲಿ ನೀಡಬೇಕು ಎಂದು ನಿಶ್ಚಯಿಸಲಾಗಿದೆ.
ಪ್ರತಿನಿತ್ಯ 1.15 ಲಕ್ಷ ಟೆಸ್ಟ್ ಮಾಡುತ್ತಿದ್ದೇವೆ. 10 ಸಾವಿರ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತು, ಈಗ ಅದನ್ನ 50 ಸಾವಿರಕ್ಕೆ ಹೆಚ್ಚಿಸಿದ್ದೇವೆ.
ಅಂತ್ಯ ಸಂಸ್ಕಾರಕ್ಕೆ ಫೋನ್ ಮೂಲಕವಾಗಲಿ ಅಥವಾ ಆನ್ ಲೈನ್ ಮೂಲಕವಾಗಲಿ ಚಿತಾಗಾರದಲ್ಲಿ ಸಮಯ ನಿಗದಿ ಪಡಿಸಿಕೊಂಡೇ ಬರಬೇಕು ಎಂದು ಕಡ್ಡಾಯಗೊಳಿಸಲಾಗಿದೆ.