ದ್ವಿತೀಯ ಪಿಯು ಪಠ್ಯ ಪರಿಷ್ಕರಣೆಯಿಂದ ರೋಹಿತ್ ಚಕ್ರತೀರ್ಥರನ್ನ ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಪಿಯು ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥರನ್ನು ಸರ್ಕಾರ ನೇಮಿಸಿತ್ತು.
ಶಾಲಾ ಪಠ್ಯದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ ಸಾಲು ಸಾಲು ಎಡವಟ್ಟು ಹಿನ್ನೆಲೆ ಪಿಯು ಪಠ್ಯ ಪರಿಷ್ಕರಣೆಯಿಂದ ರೋಹಿತ್ ಸಮಿತಿಯನ್ನ ಶಿಕ್ಷಣ ಇಲಾಖೆ ಕೈ ಬಿಟ್ಟಿದೆ. ದ್ವಿತೀಯ ಪಿಯುಸಿ ಅಧ್ಯಾಯ 4.2 ಹೊಸ ಧರ್ಮಗಳ ಉದಯ ಪಠ್ಯಭಾಗ ಪರಿಷ್ಕರಣೆಗೆ ಈ ಹಿಂದೆ ನೀಡಲಾಗಿತ್ತು.ರೋಹಿತ್ ಸಮಿತಿಯನ್ನು ವಿಸರ್ಜಿಸಿರೋದ್ರಿಂದ ಪಿಯು ಪರಿಷ್ಕರಣಾ ವರದಿಯನ್ನ ಪಡೆಯೋದಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : – ಒಂದು ವಾರದಲ್ಲಿ ಪಠ್ಯವನ್ನು ಪಬ್ಲಿಕ್ ಡೊಮೈನ್ ನಲ್ಲಿ ಇಡ್ತೀವಿ – ಬಿ.ಸಿ ನಾಗೇಶ್