ಶಿವಸೇನೆ ನಮಗೆ ಎಂದಿಗೂ ಶತ್ರು ಆಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದಲ್ಲಿ ಮರು ಮೈತ್ರಿಯ ಸುಳಿವು ನೀಡಿದ್ದಾರೆ.
ನಾವು (ಶಿವಸೇನೆ) ಎಂದಿಗೂ ಶತ್ರುಗಳಲ್ಲ. ನಾವು ಸ್ನೇಹಿತರಾಗಿದ್ದೆವು. ನಾವಿಬ್ಬರೂ ಸೇರಿ ನಮ್ಮ ವಿರೋಧಿಗಳ ವಿರುದ್ಧ ಹೋರಾಡಿದೆವು. ಅವರು ನಮ್ಮನ್ನು ಬಿಟ್ಟು ಸರಕಾರ ರಚನೆ ಮಾಡಿದರು ಎಂದು ಫಡ್ನವೀಸ್ ಹೇಳಿದ್ದಾರೆ.
ಶಿವಸೇನೆ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸೂಕ್ತ ಸಮಯ ಬಂದಾಗ ಸರಿಯಾದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.