ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮನೆಯಲ್ಲಿ ಕೆಲಸ ಮಾಡಿದ್ದ ಶಿರಸಿ ತಾಲೂಕು ಕದಂಬರ ನಾಡು ಬನವಾಸಿ ನಿವಾಸಿ ದ್ಯಾವಮ್ಮ,ದುರಗಪ್ಪ,ಕನ್ನಿ ರವರ ಯೋಗಕ್ಷೇಮ ವಿಚಾರಿಸಲು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಾಲೂಕು ಕಂಚೀನೆಗಳೂರ ಗ್ರಾಮಕ್ಕೆ ನಟ ಶಿವರಾಜಕುಮಾರ್ ಭೇಟಿ ನೀಡಿದ್ದರು.
ಕಂಚೀನೆಗಳೂರು ಗ್ರಾಮದ ನಾರಾಯಣ, ಫ,ಕಠಾರಿ ಯವರ ಮನೆಯಲ್ಲಿ ಕೆಲ ಹೊತ್ತ ಸಮಯ ಕಳೆದ ನಟ ಶಿವರಾಜಕುಮಾರ್ ದ್ಯಾವಮ್ಮ,ದುರಗಪ್ಪ,ಕನ್ನಿಯವರ ಆರೋಗ್ಯ ವಿಚಾರಿಸಿದ್ರು. ಕೆಲವು ವರ್ಷಗಳಕಾಲ ಶಿವರಾಜಕುಮಾರ್ ಮನೆಯಲ್ಲಿದ್ದ ದ್ಯಾಮವ್ವ ಅವರು ರಾಜಕುಮಾರ ಕುಟುಂಬಕ್ಕೆ ಹತ್ತಿರದವರು. ಇದನ್ನೂ ಓದಿ :- ಬೆಂಗಳೂರಿನ ಅಣ್ಣಮ್ಮ ದೇವಸ್ಧಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ
ಹಲವಾರು ವರ್ಷ ರಾಜ್ ಕುಟುಂಬದಲ್ಲಿ ಒಬ್ಬರಾಗಿದ್ದವರು,ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಶಿವರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ರು.
ಇದನ್ನೂ ಓದಿ :- ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಶೆಟ್ಟಿ