ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಸಭಾ ಚುನಾವಣೆ (Rajyasabha election) ನಡೆಯಲಿದೆ. ಇದರ ಎದೆ ಬಡಿತ ಮೂರು ಪಕ್ಷಗಳಲ್ಲಿ ಶುರುವಾಗಿದೆ. ಈ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಶಾಪಿಂಗ್(Shopping) ತೆರಳಿರುವುದು ಗಮನಸೆಳೆದಿದೆ.
ಜೆಡಿಎಸ್ (Jds) ನಿಯೋಗ ಭೇಟಿ ಬಳಿಕ ನೇರವಾಗಿ ಸಿದ್ದರಾಮಯ್ಯ ಶಾಪಿಂಗ್ ಗೆ ತೆರಳಿದ್ದಾರೆ. ಬೆಂಗಳೂರಿನ ಅವೆನ್ಯೂ ರಸ್ತೆಯ(Avenue road) ಖಾದಿ ಭಂಡಾರ್ (Khadhi bhandar) ಮಳಿಗೆಗೆ ತೆರಳಿದ ಸಿದ್ದರಾಮಯ್ಯ ಪಂಚೆ ಖರೀದಿಸಿದ್ದಾರೆ. 30 ಪಂಚೆಗಳನ್ನ ಏಕ ಕಾಲಕ್ಕೆ ಖರೀದಿ ಮಾಡಿದ್ದಾರೆ. ಒಂದು ಪಂಚೆಗೆ ಸಿದ್ದರಾಮಯ್ಯ 650 ರೂ. ನೀಡಿದ್ದಾರೆ. ಡಿಸ್ಕೌಂಟ್ ಹೋಗಿ ಪ್ರತಿ ಪಂಚೆಗೆ 650 ರೂ.ಗೆ ನೀಡಿ ಖರೀದಿ ಮಾಡಿದ್ದಾರೆ.
ಪಂಚೆ ಖರೀದಿ ಸಮಯದಲ್ಲಿ ವಿವಿಧ ಬ್ರ್ಯಾಂಡ್ ಬಗ್ಗೆಯೂ ಸಿದ್ದರಾಮಯ್ಯ ವಿಚಾರಿಸಿದ್ದಾರೆ. ಮೈಸೂರು ತಿರುಪುರು ಖಾದಿಯಲ್ಲಿ ತೆಗೆದುಕೊಂಡಿದ್ದ ಪಂಚೆ ಬಗ್ಗೆ ಸಿದ್ದರಾಮಯ್ಯ ಅಂಗಡಿಯವರ ಬಳಿ ವಿಚಾರಿಸಿದ್ದಾರೆ. ಅಂತಿಮವಾಗಿ ಮೈಸೂರಿನ ತಿರುಪುರು ಖಾದಿಯ 30 ಪಂಚೆಗಳನ್ನ ಖರೀದಿ ಮಾಡಿದ್ದಾರೆ. ಇದನ್ನೂ ಓದಿ : – ಪತ್ನಿ ಸುಮಾಳ ಕಿರುಕುಳದಿಂದ ಅನಂತರಾಜು ಆತ್ಮಹತ್ಯೆ – ಸ್ನೇಹಿತೆ ರೇಖಾ ಸ್ಪಷ್ಟನೆ