ಪಠ್ಯ ಪುಸ್ತಕವನ್ನ ವಾಪಸ್ ಪಡೆಯಿರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿಎಂ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ನವರು ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ. ಅವರ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿಲ್ವಾ..? ಈಗಾಗಲೇ ಸಮಿತಿ ವಿಸರ್ಜನೆ ಮಾಡುತ್ತೇವೆ. ಪಠ್ಯದಲ್ಲಿ ಸಮಸ್ಯೆಗಳಿದ್ರೆ ಪರಿಷ್ಕರಣೆ ಮಾಡಿ ಮುದ್ರಣ ಮಾಡುತ್ತೇವೆ ಎಂದು ತಿಳಿಸಿದ್ರು. ಇದನ್ನು ಓದಿ :- ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ
ಕೋವಿಡ್ ಹೆಚ್ಚಳ ವಿಚಾರ
ಕೋವಿಡ್ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಕೂಲಂಕಷ ವರದಿ ಕೇಳಿದ್ದೇನೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವ್ರು ಜಿಲ್ಲಾವಾರು ಸಭೆ ಮಾಡಿ ವರದಿ ಕೊಡ್ತೀನಿ ಅಂದಿದ್ದಾರೆ. ಅದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಕೆಲವು ನಿರ್ಣಯ ಮಾಡ್ತೇವೆ. ಯಾರೂ ಕೂಡಾ ಗಾಬರಿ ಆಗುವ ಅಗತ್ಯ ಇಲ್ಲ.
ಎರಡನೇ ಅಲೆಯಲ್ಲಿ ಕೋವಿಡ್ ನಿಂದ ಮೃತರಾದವರ ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಕೆಲವರಿಗೆ ಪರಿಹಾರ ಬಿಟ್ಟು ಹೋಗಿದ್ರೆ ಅದನ್ನು ಕೊಡಲು ಕ್ರಮ ತಗೋತ್ತೇವೆ ಎಂದು ಹೇಳಿದ್ರು. ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರ ದುರ್ಮರಣ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿ ಕ್ರಮ ತಗೋತ್ತೇವೆ.
ಇದನ್ನು ಓದಿ :- CORONA – ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಪತ್ತೆ…!