ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ದೊಡ್ಡ ಹಗರಣ. ಸರ್ಕಾರದಲ್ಲಿ ಇದೊಂದೇ ಹಗರಣ ಅಲ್ಲ. ಉಪನ್ಯಾಸಕರ ನೇಮಕಾತಿಯಲ್ಲೂ ಹಗರಣಗಳಾಗಿವೆ.ಅಂತವರನ್ನ ಬಂಧಿಸಲಾಗಿದೆ. ಬಿಜೆಪಿ ಸರ್ಕಾರ- ಇದು ಹಗರಣಗಳ ಸರ್ಕಾರ. ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಈ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ಮತ್ತು ಹಗರಣ ಬೇರೆ ಯಾವಾಗಲೂ ನಡೆದಿಲ್ಲ. ಎಲ್ಲ ಇಲಾಖೆಗಳಲ್ಲೂ ಹಗರಣಗಳು ನಡೆಯುತ್ತಿವೆ. ಪಿಎಸ್ ಐ ನೇಮಕಾತಿಯಲ್ಲಿ ಇಷ್ಟೊಂದು ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಟ್ಟಿರುವಂತಹದ್ದು, ತಿದ್ದಿರುವಂತಹದ್ದು..ಯಾವ ಕಾಲದಲ್ಲಿ ನಡೆದಿತ್ತು ಹೇಳಿ. ನಮ್ಮ ಸಕಾ೯ರದಲ್ಲೂ ನೇಮಕಾತಿ ಮಾಡಿದ್ವಿ ಆದ್ರೆ ಯಾವ ಕಾಲದಲ್ಲೂ ಈ ರೀತಿ ಆಗಿರಲಿಲ್ಲ ಎಂದರು.
ಸಕಾ೯ರವೇ ಭ್ರಷ್ಟ ಆಗಿರೋದ್ರಿಂದ ಇಷ್ಟೆಲ್ಲಾ ಆಗಿದೆ. ಇವರೇ ಪ್ರೋಟೆಕ್ಷನ್ ಕೊಡೋವಾಗ ಯಾವಾಗ ಹಿಡಿತಾರೆ. ಒಬ್ಬ ಹೆಣ್ಣು ಮಗಳು ದಿವ್ಯಾ ಹಾಗರಗಿ ಇದಲ್ಲದೆ, ಹಿಂದೆಯೂ ಇಂತಹ ಹಗರಣ ಮಾಡಿರಬಹುದು. ಆ ಹೆಣ್ಣು ಮಗಳನ್ನ ಹಿಡಿಯೋಕೆ 20 ದಿನ ಬೇಕೆಂದ್ರೆ ವೈಫಲ್ಯ ಅಲ್ವಾ ಇದು..ಆಕೆಯನ್ನ ತಕ್ಷಣ ಹಿಡಿಯಬೇಕಿತ್ತು. ಇದರ ಹಿಂದೆ ಪೋಲಿಸನವರು ಮತ್ತು ಸಕಾ೯ರದ ಪ್ರೊಟೆಕ್ಷನ್ ಇದೆ ಎಂದು ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :- ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣ – ಪತ್ರದ ಮೂಲಕ ಸಿಐಡಿ ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ