ರಾಣೆಬೆನ್ನೂರಿನಲ್ಲಿ ದಕ್ಷಿಣ ಭಾರತದ ದೊಡ್ಡ ಸ್ಫಟಿಕ ಲಿಂಗ ಕಳುವು – ಸ್ವಾಮೀಜಿ ದಿಗ್ಭ್ರಮೆ

ದಕ್ಷಿಣ ಭಾರತದ ಅತ್ಯಂತ ದೊಡ್ಡ ಸ್ಪಟಿಕ ಲಿಂಗ ಕಳವಾಗಿದೆ. ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಮಠದ ಅಪರೂಪದ ಸ್ಪಟಿಕ ಲಿಂಗ ಕಳುವಾಗಿದೆ. ಇದನ್ನ ಕೇಳಿ ಭಕ್ತರು ದಿಗ್ಭ್ರಮೆಗೊಂಡಿದ್ದಾರೆ.

ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಧಾರ್ಮಿಕ ಕಾರ್ಯಗಳ ನಿಮಿತ್ತ ಕೊಟ್ಟೂರಿಗೆ ತೆರಳಿದ್ದರು. ಮಠದಲ್ಲಿ ಸ್ಪಟಿಕ ಲಿಂಗ ಕಳುವಾಗಿದ್ದು ಕೇಳಿ ಸ್ವಾಮೀಜಿಗೆ ಶಾಕ್ ಆಗಿದೆ. ಕೂಡಲೇ ವಿಜಯನಗರ ಜಿಲ್ಲೆ ಕೊಟ್ಟೂರಿನಿಂದ ಲಿಂಗದಹಳ್ಳಿ ಮಠಕ್ಕೆ ಧಾವಿಸಿದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : – ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನ ಮರೆಯಬಾರದು – ಬಿ.ಸಿ ಪಾಟೀಲ್

ಮಠದ ವಿದ್ಯಾರ್ಥಿಗಳು ದಿನನಿತ್ಯದಂತೆ ಬೆಳಿಗ್ಗೆ ಪೂಜೆ ಸಲ್ಲಿಸೋಕೆ ತೆರಳಿದಾಗ ಸ್ಪಟಿಕ ಲಿಂಗ ಇಲ್ಲ ಎಂದು ಗೊತ್ತಾಗಿ ಸ್ವಾಮೀಜಿಗೆ ವಿಷಯ ತಿಳಿಸಿದ್ದಾರೆ. ಸ್ಪಟಿಕ ಲಿಂಗ ಇರುವ ಜಾಗದಲ್ಲಿದ್ದ ಸಿ.ಸಿ ಟಿವಿ ಒಡೆದು ಸ್ಪಟಿಕ ಲಿಂಗ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿರೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : – RSS, ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವ ಗೌರವ ಹಾಳಾಗುತ್ತೆ – ಯಡಿಯೂರಪ್ಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!