ಭಾರತದ ವಿಜಯ ವೀರ್ ಸಿಧು ಮತ್ತು ತೇಜಸ್ವಿನಿ ಜೋಡಿ ಐಎಸ್ಎಸ್ಎಫ್ ವಿಶ್ವಕಪ್ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಯಶಸ್ವಿಯಾಗಿ ಗುರಿ ಇಟ್ಟಿದ್ದಾರೆ.
ದೆಹಲಿಯಲ್ಲಿ ಶನಿವಾರ ನಡೆದ ಫೈನಲ್ ನಲ್ಲಿ ವಿಜಯವೀರ್ ಸಿಂಧು ಮತ್ತು ತೇಜಸ್ವಿನಿ ಜೋಡಿ ಭಾರತದವರೇ ಆದ ಗುರುಪ್ರೀತ್ ಸಿಂಗ್ ಮತ್ತು ಅಶೋಕ್ ಅಭಿಧ್ಯಾನ ಪಾಟೀಲ್ ಜೋಡಿಯನ್ನು 9-1 ಅಂಕಗಳಿಂದ ಸುಲಭವಾಗಿ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಕ್ವಾಲಿಫೈಯರ್-2 ಸುತ್ತಿನಲ್ಲಿ ಗುರುಪ್ರೀತ್ ಸಿಂಗ್ ಮತ್ತು ಪಾಟೀಲ್ ಜೋಡಿ 370 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ವಿಜಯವೀರ್ ಮತ್ತು ತೇಜಸ್ವಿನಿ ಜೋಡಿ 368 ಅಂಕಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್ ನಲ್ಲಿ ವಿಜವೀರ್ ಜೋಡಿ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.