ಕೋಲಾರ: ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಜೆಡಿಎಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯ ಚುನಾವಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರೋಧವಾಗಿ ಮೂರು ಪಕ್ಷಗಳು ಒಂದಾಗಿವೆ. ನನ್ನನ್ನು ಕಾಂಗ್ರೆಸ್ ಗೆ ಸೇರಿಸಲು ಕೆ.ಎಚ್ ಮುನಿಯಪ್ಪ ಬಿಡುತ್ತಿಲ್ಲ. ಅವರ ಹಿಂದೆ ಜಿಲ್ಲೆಯಲ್ಲಿ ಯಾವ ಶಾಸಕರು ಇಲ್ಲ. ಈತನ ಹಿಂದೆ ಇಂದಿರಾ ಗಾಂಧಿ ಕಾಲದಿಂದಲೂ ಬಂದಿರುವ ಮುಸ್ಲಿಂ ಮತಗಳು ಮಾತ್ರ ಇದೆ. ತಾಕತ್ತಿದ್ರೆ ಹಳ್ಳಿಗಳಲ್ಲಿ ಮತ ಪಡೆಯಲಿ ನೋಡೋಣ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಪಕ್ಷದಿಂದ ಕೆ.ಹೆಚ್ ಮುನಿಯಪ್ಪ ಉಚ್ಚಾಟನೆ ಆಗಬೇಕು. ಈ ತರ ಮನಸ್ಥಿತಿ ಇರುವ ಇನ್ನು ಕೆಲವರನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಬೇಕು. ಆಗ ಚಿಂತಾಮಣಿ ತಾಲೂಕಿನ ಸುಧಾಕರ್ ಹಾಗೂ ನಾನು ಕಾಂಗ್ರೆಸ್ ಗೆ ಬರಲು ಅವಕಾಶ ಸಿಗುತ್ತೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಕೂ ಹೆಚ್ಚು ಸೀಟು ಗೆಲ್ಲಬಹುದು ಎಂದರು.
ಕೆ.ಎಚ್ ಮುನಿಯಪ್ಪ ಇದ್ರೆ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತೆ. ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸೋಲುತ್ತೆ. ಚುನಾವಣೆಗೂ ಮುನ್ನ ಕೆ.ಎಚ್ ಮುನಿಯಪ್ಪರನ್ನು ಉಚ್ಚಾಟನೆ ಮಾಡಬೇಕು ಅಂತ ಒತ್ತಾಯ ಮಾಡಿದರು.