ವೃದ್ಧ ಭಿಕ್ಷುಕಿಯನ್ನು ಬೀದಿನಾಯಿಗಳು ಕಚ್ಚಿ ತಿಂದು ತೇಗಿದ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನ ಶಶಿಧರ ಲೇಔಟ್ ನ ದ್ವಾರಕಾನಗರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮಲಗಿದ್ದ ವೃದ್ಧೆಯನ್ನ ಎಳೆದೊಯ್ದ 7-8 ಶ್ವಾನಗಳು, ವೃದ್ಧೆ ಕಚ್ಚಿ ಕೊಂದು ಭಕ್ಷಿಸಿವೆ.
ಲಾಕ್ ಡೌನ್ ನಿಂದಾಗಿ ಬೀದಿ ನಾಯಿಗಳಿಗೆ ಆಹಾರ ಸಿಗದ ಹಿನ್ನೆಲೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ನಾಯಿಗಳು ವೃದ್ಧೆಯ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗಿವೆ.
ರಾಜರಾಜೇಶ್ವರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.