ಕುಡಿದ ಮತ್ತಿನಲ್ಲಿ ಶುರುವಾರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಫ್ರೆಂಡ್ಸ್ ಬಾರ್ ಬಳಿ ನಡೆದಿದೆ.
ಬಾರ್ ಬೆಂಡರ್ ಕೆಲಸ ಮಾಡಿಕೊಂಡಿದ್ದ ಮೋಹನ್ ಅಲಿಯಾಸ್ ಮುಂಗುಸಿ (45) ಮೃತ ವ್ಯಕ್ತಿ.
18 ವರ್ಷಗಳಿಂದ ಬಾಗಲಗುಂಟೆಯಲ್ಲಿ ವಾಸವಾಗಿದ್ದ ಮೋಹನ್ ಬಾರ್ ಬೆಂಡರ್ ಕೆಲಸ ಮಾಡಿಕೊಂಡಿದ್ದ. ಎಂದಿನಂತೆ ಕೆಲಸ ಮುಗಿಸಿಕೊಂಡು ಬಾರ್ ಗೆ ಹೋಗಿದ್ದಾಗ ನಾಲ್ವರ ಮಧ್ಯೆ ಜಗಳ ಶುರುವಾಗಿದೆ.
ಮುಂಗುಸಿ, ಪವನ್, ಕಿಶೋರ್, ಮತ್ತೋರ್ವ ಸೇರಿ ನಾಲ್ವರ ಮದ್ಯೆ ಜಗಳ ಶುರುವಾಗಿದ್ದು, ದೊಣ್ಣೆಯಿಂದ ಹೊಡೆದು ಮುಂಗುಸಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಜಗಳದಲ್ಲಿ ಕಿಶೋರ್, ಪವನ್ ಹಾಗೂ ಮತ್ತೊಬ್ಬ ಸೇರಿ ಹಲ್ಲೆ ಮಾಡಿದ್ದರಿಂದ ಮುಂಗುಸಿ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ಕಿಶೋರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.