ಶ್ರೀಲಂಕಾ ಅರ್ಥಿಕ ಬಿಕ್ಕಟ್ಟು ಮುಂದುವರಿದಿದೆ. ದ್ವೀಪರಾಷ್ಟ್ರದಲ್ಲಿ ಇಂಧನಕ್ಕಾಗಿ ಜನಸಮಾನ್ಯರ ಪರದಾಟ ಮುಂದುವರಿದಿದೆ. ಇಂಧನ ದರಗಳು ಶೇ.24.3ರಿಂದ 38.4ರಷ್ಟು ಅಂದರೆ, ಪ್ರತೀ ಲೀಟರ್ ಪೆಟ್ರೋಲ್ ದರ 420ರೂಗಳಿಗೆ ಮತ್ತು ಪ್ರತೀ ಲೀಟರ್ ಡೀಸೆಲ್ ದರ 400 ರೂಗಳಿಗೆ ಏರಿಕೆಯಾಗಿದೆ. ವಿದೇಶಿ ವಿನಿಮಯ ಮೀಸಲು ಕೊರತೆಯಿಂದ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರದಲ್ಲಿ ಇದು ದಾಖಲೆಯ ತೈಲ ಬೆಲೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ), ಆಕ್ಟೇನ್ 92 ಪೆಟ್ರೋಲ್ ದರವನ್ನು ಶೇ 24.3ರಷ್ಟು ಅಥವಾ ಲೀಟರ್ಗೆ 82 ರೂಪಾಯಿಯಷ್ಟು ಮತ್ತು ಡೀಸೆಲ್ ದರವನ್ನು ಲೀಟರ್ಗೆ ಶೇ 38.4ರಷ್ಟು ಅಥವಾ 111 ರೂ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.ಇದನ್ನೂ ಓದಿ :- ರಾಜಕೀಯ ವ್ಯವಹಾರಗಳ ಗುಂಪು, ಟಾಸ್ಕ್ ಫೋರ್ಸ್ ರಚಿಸಿದ ಸೋನಿಯಾ ಗಾಂಧಿ- ರೆಬಲ್ ಗಳಿಗೂ ಸ್ಥಾನ ನೀಡಿ ಭಿನ್ನಮತ ಶಮನಕ್ಕೆ ಯತ್ನ…!
“ತೈಲ ಬೆಲೆಯು ಇದು ನಸುಕಿನ 3 ಗಂಟೆಯಿಂದ ಪರಿಷ್ಕರಣೆಯಾಗಲಿದೆ. ಬೆಲೆ ಏರಿಕೆಗಾಗಿ ಸಲ್ಲಿಸಿದ್ದ ತೈಲ ದರ ಸೂತ್ರದ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ” ಎಂದು ಇಂಧನ ಮತ್ತು ವಿದ್ಯುತ್ ಸಚಿವ ಕಾಂಚನ ವಿಜೆಶೇಖರ ತಿಳಿಸಿದ್ದಾರೆ. ಲಂಕಾದಲ್ಲಿ ಹಣದುಬ್ಬರ ದರ ಶೇ 40ರತ್ತ ಸಾಗುತ್ತಿದೆ. ಆಹಾರ, ಇಂಧನ ಮತ್ತು ಔಷಧಗಳ ಕೊರತೆ, ರಾಷ್ಟ್ರವ್ಯಾಪಿ ಪ್ರತಿಭಟನೆಗಳು, ರಾಜಕೀಯ ಅರಾಜಕತೆ ದೇಶವನ್ನು ಅಸ್ಥಿರಗೊಳಿಸಿದೆ.
ಇದನ್ನೂ ಓದಿ :- ಜಿಲ್ಲಾಪಂಚಾಯತ್ ತಾಲ್ಲೂಕ್ ಪಂಚಾಯತ್ ಚುನಾವಣೆಗೂ ಮುಹೂರ್ತ ಫಿಕ್ಸ್ – 12 ವಾರಗಳ ಗಡುವು ನೀಡಿದ ಹೈಕೋರ್ಟ್