ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕವಾಗಿ ಕುಸಿತ ಕಂಡಿದೆ. ಇಂದು 36 ಪೈಸೆ ಇಳಿಕೆ ಕಂಡಿದ್ದು ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 78.29ಗೆ ವಿನಿಮಯವಾಗಿದೆ.
![](https://rajnewskannada.in/wp-content/uploads/2022/06/image-196.png)
ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕಂಡಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ 120.23 ಡಾಲರ್ ಗಳಷ್ಟಾಗಿದ್ದು, ಶೇ.14ರಷ್ಟು ಏರಿಕೆಯಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ : – ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ – ಆರ್ ಬಿಐ ಸ್ಪಷ್ಟನೆ
![](https://rajnewskannada.in/wp-content/uploads/2022/06/image-197.png)
ಕಳೆದ ಶುಕ್ರವಾರ 19 ಪೈಸೆ ಇಳಿಕೆಯಾಗಿ 1 ಡಾಲರ್ ಬೆಲೆ 77.93 ರೂ. ಗಳಾಗಿತ್ತು. ಆದರೆ ಏಷ್ಯಾ ಹಾಗೂ ಯುರೋಪಿಯನ್ ಕರೆನ್ಸಿಯ ಮೌಲ್ಯ ಕುಸಿತವಾಗಿದ್ದರಿಂದ 77.70 ರೂ.ದಾಟಿಲ್ಲ. ಆದ್ದರಿಂದ ರೂಪಾಯಿ ಮೌಲ್ಯ 78 ರೂಪಾಯಿಗಿಂತಲೂ ಕಡಿಮೆಯಾಗಲು ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!