ವಿಧಾನ ಪರಿಷತ್ ಟಿಕೇಟ್ ಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಅವೆಲ್ಲ ಹೆಸರು ನಾವು ಕಳಿಸಿದ್ದೇವೆ. ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಶಿಫಾರಸು ಮಾಡಿದ್ದನ್ನು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಇರೋದೇ 2 ಸ್ಥಾನ, ಅದಕ್ಕೆ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಶಿಫಾರಸ್ಸು ಮಾಡಿದ್ದೇವೆ. ರಾಜ್ಯ ಸಭೆಯದ್ದು ಇನ್ನೂ ಏನೂ ತೀರ್ಮಾನ ಆಗಿಲ್ಲ. ಇದನ್ನೂ ಓದಿ :- ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ – ಸಿಎಂ ಬೊಮ್ಮಾಯಿ ಟ್ವೀಟ್
ನಾನು ಸಿದ್ದರಾಮಯ್ಯ ಕುತ್ಕೊಂಡೇ ಶಿಫಾರಸ್ಸು ಮಾಡಿದ್ದು. ಒಂದೇ ಅಥಾವ ಎರಡು ಹೆಸರು ನಾವು ಕೊಟ್ಟಿಲ್ಲ. ಇರೋದು 2 ಸೀಟು ಎಷ್ಟು ಹೆಸರು ಕೊಡೋಕೆ ಆಗುತ್ತೆ. ಎಲ್ಲ ವರ್ಗದದವರನ್ನ ಗಮನದಲ್ಲಿ ಇಟ್ಟುಕೊಂಡು ಶಿಫಾರಸ್ಸು ಮಾಡಲಾಗಿದೆ. ಇದನ್ನ ತಿಳಿದಿಕೊಂಡು ವರಿಷ್ಟರು ತೀರ್ಮಾನ ಮಾಡ್ತಾರೆ ಎಂದು ಡಿಕೆಶಿ ತಿಳಿಸಿದ್ರು.
ಇದನ್ನೂ ಓದಿ :- ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಿದ ನಂತರ ಬೆಂಗಳೂರಿನಲ್ಲಿ ತೈಲ ಬೆಲೆ ಹೇಗಿದೆ?