ವಿಜಯನಗರದ( vijayanagara) ಸರ್ಕಾರಿ ಕಾಲೇಜಿನ (college )16 ಬ್ಯಾಂಕ್ ಅಕೌಂಟ್ ನಿಂದ ಮೂರು ಕೋಟಿ ರೂಪಾಯಿ ಮಂಗಮಯಾವಾಗಿದೆ. ಹೊಸಪೇಟೆಯ ( hoskotte )ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಟಿಗಟ್ಟಲೇ ಹಣ ಗೋಲ್ ಮಾಲ್ ಆಗಿದೆ .
ಕಾಲೇಜು ಆಡಳಿತ ಮಂಡಳಿಯ ಆಂತರಿಕ ಕಚ್ಚಾಟದಿಂದ ಈ ಅಕ್ರಮ ಹೊರ ಬಂದಿದೆ . ವಿವಿಧ ಬ್ಯಾಂಕ್ ನ 16 ಖಾತೆಯಿಂದ 3 ಕೋಟಿಗೂ ಹೆಚ್ಚು ಹಣ ಹಂತ ಹಂತವಾಗಿ ಡ್ರಾ ಮಾಡಿಕೊಳ್ಳಲಾಗಿದೆ . ಪರಿಣಾಮ ಕಾಲೇಜಿನ ದೈನಂದಿನ ಖರ್ಚು, ಅರೆಕಾಲಿಕ ಸಿಬ್ಬಂದಿ ವೇತನ ನೀಡಲು ಸಾಧ್ಯವಾಗ್ತಿಲ್ಲ . ಹಳೇ ಪ್ರಾಂಶುಪಾಲ ಕನಕೇಶ್ವರ ಮೂರ್ತಿ ಎಪ್ರಿಲ್ 30ರಿಂದ ನಿವೃತ್ತಿಯಾಗಿದ್ದಾರೆ. ಮೇ 1ರಂದು ನಟರಾಜ್ ಪಾಟೀಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮಧ್ಯೆ ನಡೆದ ಘಟನೆಗಳಲ್ಲಿ ಹಣದ ಗೋಲ್ ಮಾಲ್ ಹೊರಗೆ ಬಂದಿದೆ . ಹಳೇ ಪ್ರಾಂಶುಪಾಲರು ಹೇಳೋ ಪ್ರಕಾರ ಎಲ್ಲ ಹಣ ಖರ್ಚು ಮಾಡಿಲ್ಲ. ಒಂದಷ್ಟು ಹಣ ಕಾಲೇಜು ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ . ಆದ್ರೇ ಹೊಸ ಪ್ರಾಂಶುಪಾಲರು ನನಗೆ ಈ ಬಗ್ಗೆ ಗೊತ್ತಿಲ್ಲ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೇನೆ ಎನ್ನುತ್ತಿದ್ದಾರೆ . ಇದನ್ನೂ ಓದಿ : – ಮತ್ತೆ ಬಿಜೆಪಿ ತೆಕ್ಕೆಗೆ ಹುಬ್ಬಳ್ಳಿ – ಧಾರವಾಡ ಪಾಲಿಕೆ- ಮೇಯರ್ ಆಗಿ ಈರೇಶ, ಉಪಮೇಯರ್ ಆಗಿ ಉಮಾ ಆಯ್ಕೆ