31 ಕೆಜಿ ತೂಕದ ಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿಕೊಂಡು, ಸಾಗಿಸುವಾಗ ಕಳ್ಳರು ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸೂರು ಪಟ್ಟಣದ ಯರಗುಂಟಿ ಕ್ರಾಸ್ ಹತ್ತಿರ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದ ಲಿಂಗಸ್ಗೂರು ಠಾಣಾ ಪೊಲೀಸರು, 2 ಆರೋಪಿಗಳನ್ನು ಮತ್ತು ಸುಮಾರು 1ಲಕ್ಷ 25 ಸಾವಿರ ಮೌಲ್ಯದ ಗಂಧದ ಕಟ್ಟಿಗೆಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕೆಸರಟ್ಟಿ ಸೀಮದ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಹಾಕಿದ ಗಂಧದ ಮರ ಕಡಿದು ಕಳ್ಳತನದಲ್ಲಿ ಹೊತ್ತೊಯ್ಯುತ್ತಿದ್ದ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿ, ಹನುಮಂತು, ದುರ್ಗಪ್ಪ, ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ