ಬಳ್ಳಾರಿ : ಕೆರೆಯಲ್ಲಿ ಈಜಲು ಹೋಗಿ ಮೂವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೋಟೆಹಾಳು ಸೂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ರಾಜೇಗೌಡ ಟಿ. (40) ರಾಂಪುರ, ಯೋಗೇಶ್ ಗೌಡ (28) ಕೆ ಸೂಗೂರು ಹಾಗೂ ಸುರೇಶ್ ಗೌಡ(27) ಎಂದು ಗುರುತಿಸಲಾಗಿದೆ.
ರಾಮೇಗೌಡ ಎಂಬುವವರಿಗೆ ಸೇರಿದ್ದ ಮೀನಿನ ಕೆರೆಯಲ್ಲಿ ನಾಲ್ವರು ಸ್ನೇಹಿತರು ಈಜಲು ತೆರಳಿದ್ದರು ಎನ್ನಲಾಗಿದೆ. ಕೆರೆಯಲ್ಲಿ ತೆಪ್ಪ ಮುಗುಚಿ ಈಜು ಬಾರದೇ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಈಜಿಕೊಂಡು ಪಾರಾಗಿದ್ದಾನೆ.
ಸುದ್ದಿ ತಿಳಿಯುತ್ತಲೇ ತಹಶೀಲ್ದಾರ್ ಎಸ್ ಬಿ ಕೂಡಲಗಿ, ಸಿಪಿಐ ರಮೇಶ್ ಟಿ ಪವರ್, ಪಿಎಸ್ ಐ ಕೆ ರಂಗಯ್ಯ, ಎಎಸ್ಐ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಿ ವಿವರಗಳನ್ನು ಪಡೆದು ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಕೆರೆಯಲ್ಲಿ ಮುಳುಗಿದ್ದವರ ಹುಡುಕಾಟ
ನಡೆಸಿದ್ದರು.
ದಡೇಸೂಗೂರು ಗ್ರಾಮದ ಮೂಲದವರಾದ ಮೀನುಗಾರರು ಬಂದು ಕೆರೆಯಲ್ಲಿ ಮುಳುಗಿದ್ದ ಮೃತ ದೇಹಗಳ ಪತ್ತೆಹಚ್ಚಿ ಹೊರಕ್ಕೆ ತಂದಿದ್ದಾರೆ. ಘಟನೆ ಬಗ್ಗೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.