ರಾಯಚೂರು : ಸಿಡಿಲು ಬಡಿದು ಓರ್ವ ಕುರಿಗಾಹಿ, 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಆನಂದಗಲ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೇದಿನಾಪುರ ಗ್ರಾಮದ ಕುರಿಗಾಹಿ ಈರಪ್ಪ(32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನ ಜತೆಯಲ್ಲಿದ್ದ 16 ಕುರಿಗಳು ಸ್ವಾನ್ನಪ್ಪಿವೆ. ಮರದ ಕೆಳಗಡೆ ನಿಂತಿರುವ ವೇಳೆ ಸಿಡಲು ಬಡಿದ ಪರಿಣಾಮ ಕುರಿಗಾಹಿ ಈರಪ್ಪ, ಕುರಿಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳಾಗಿವೆ. ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.