ಹುಬ್ಬಳ್ಳಿಯಲ್ಲಿ (Hubballi) ಸಿಎಂ ಸೂಚನೆ ಮೇರೆಗೆ ಅವಳಿನಗರದಲ್ಲಿ ಖಾಕಿ ಹೈ ಅಲರ್ಟ್ ಆಗಿದೆ. ಈಗಾಗಲೇ ಸಿಎಂ ಬೊಮ್ಮಾಯಿ (Bommai) ಇನ್ಸ್ ಪೆಕ್ಟರ್ ಗಳಿಗೆ ಶಾಂತಿ ಕಾಪಾಡುವ ಹೊಣೆಗಾರಿಕೆ ನೀಡಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಬಂದೋಬಸ್ತ್ ಜೊತೆಗೆ ಸೌಹಾರ್ದತೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಗೋಕುಲ ರೋಡ್ (Gokul road) ಪೊಲೀಸ್ ಇನ್ಸ್ ಪೆಕ್ಟರ್ ನಡೆಸಿದ ಶಾಂತಿ ಸಭೆ ಯಶಸ್ವಿಯಾಗಿದೆ. ತಮ್ಮ ವ್ಯಾಪ್ತಿಯ ಧರ್ಮ ಮುಖಂಡರಿಗೆ ಇನ್ಸ್ ಪೆಕ್ಟರ್ ನಿರ್ದೇಶನ ನೀಡಿದ್ದಾರೆ. ಗೋಕುಲ ರೋಡ್ ಠಾಣೆ ಇನ್ಸ್ ಪೆಕ್ಟರ್ ಖಾಲಿ ಮಿರ್ಚಿ ಶಾಂತಿಯ ಸಭೆ ನಡೆಸಿದ್ದಾರೆ. ದೇಶದಲ್ಲಿ ಕೋಮು ಗಲಭೆ ವಿಚಾರಗಳನ್ನ ತಮ್ಮ ಏರಿಯಾಗಳಲ್ಲಿ ಚರ್ಚೆ ಮಾಡಬಾರದು. ಧರ್ಮಾಧರಿತ ವಿಷಗಳ ಕುರಿತು ವಾಗ್ವಾದ ಮಾಡುವುದು ಮಾಡಬಾರದು. ಓಣಿಯಲ್ಲಿ ಸೌಹಾರ್ದತವಾಗಿ ಸಹೋದರಂತೆ ಬಾಳಬೇಕು ಎಂದು ಇನ್ಸ್ ಪೆಕ್ಟರ್ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ : – ನಾನು ಸೋಲೊದಲ್ಲ ನನ್ನೊಬ್ಬನಿಂದ ಪಾರ್ಲಿಮೆಂಟ್ ನಡೆಯಲ್ಲ – ಕುಪೇಂದ್ರ ರೆಡ್ಡಿ