ನ್ಯೂಯಾರ್ಕ್: ಹಲವೆಡೆ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ಸರ್ವರ್ ಡೌನ್ ಆಗಿದೆ. ಈ ಸಂಬಂಧ ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ 15 ಸಾವಿರಕ್ಕೂ ಅಧಿಕ ಟ್ವಿಟರ್ ಬಳಕೆದಾರರು ದೂರು ನೀಡಿದ್ದಾರೆ. ‘#twitterdown’ ನಡಿ ಸಾವಿರಾರು ಬಳಕೆದಾರರು ದೂರು ಸಲ್ಲಿಸಿದ್ದಾರೆ.
ಟ್ವಿಟರ್ ಸರ್ವರ್ ಡೌನ್ ಆಗುತ್ತಿರುವ ಕುರಿತು ತರಹೇವಾರಿ ಮೆಮೆಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ ಯಾವುದೇ ಅಧಿಕೃತ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ. ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಈ ಸಮಸ್ಯೆ ಎದುರಾಗಿತ್ತು.
ಕಳೆದ ವಾರವಷ್ಟೇ ವಿಶ್ವಾದ್ಯಂತ ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದವು. ತಾಂತ್ರಿಕ ದೋಷದಿಂದ ಸುಮಾರು ಅರ್ಧ ತಾಸಿಗೂ ಅಧಿಕ ಹೊತ್ತು ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂಗಳನ್ನು ಬಳಕೆ ಮಾಡಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ದೋಷದಿಂದ ಹೀಗಾಗಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು.