ಕಳೆದ ಒಂದು ವಾರದಿಂದ ಸತತ ದಾಳಿ ನಡೆಸುತ್ತಿರುವ ರಷ್ಯಾದ ಯುದ್ಧ ವಿಮಾನವನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 8ನೇ ದಿನಕ್ಕೆ ಕಾಲಿರಿಸಿದೆ. ಇದೀಗ ಉಕ್ರೇನ್ ಕೂಡ ಪ್ರತಿದಾಳಿ ಆರಂಭಿಸಿದ್ದು, ರಷ್ಯಾದ ಯುದ್ಧ ವಿಮಾನ ಸುಖೋಯ್ ಎಸ್ ಯು-30 ವಿಮಾನವನ್ನು ಹೊಡೆದುರುಳಿಸಿದೆ.
ಇರ್ಫಿನ್ ನಗರದ ಮೇಲೆ ಸತತ ಬಾಂಬ್ ದಾಳಿ ನಡೆಸುತ್ತಿದ್ದ ಸುಖೋಯ್ ಯುದ್ಧ ವಿಮಾನ ಗುರಿಯಾಗಿಸಿ ಉಕ್ರೇನ್ ಸೇನೆ ಪ್ರತಿದಾಳಿ ನಡೆಸಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.
ಇದೇ ವೇಳೆ ರಷ್ಯಾ ಕಮಾಂಡರ್ ಮೇಜರ್ ಜನರಲ್ ಆ್ಯಂಡಿ ಎಂಬುವವರನ್ನು ರಷ್ಯಾ ಸೇನೆ ಹತ್ಯೆಗೈದಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.