ಲಖ್ನೌ: ದೇಶಾದ್ಯಂತ ಕೊರೋನಾ ಸೋಂಕು ಪ್ರಕರಣಗಳು ಆತಂಕ ಸೃಷ್ಟಿಸಿವೆ. ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕಠಿಣ ನಿಯಮಗಳನ್ನು ಹೇರುತ್ತಿವೆ.
ಉತ್ತರ ಪ್ರದೇಶ ಸರ್ಕಾರ ಇದೀಗ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಲಾಕ್ಡೌನ್ ಮಾಡಬೇಕೆಂದು ಆದೇಶ ಹೊರಡಿಸಿದೆ. ಕೊರೊನಾ ಹರಡದಂತೆ ತಡೆಯಲು ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಉತ್ತರ ಪ್ರದೇಶ ಸರ್ಕಾರ, ಮಾಸ್ಕ್ ಧರಿಸದೇ ಮೊದಲ ಬಾರಿಗೆ ಸಿಕ್ಕಿಬಿದ್ದವರಿಗೆ ರೂ1,000 ದಂಡ ಮತ್ತು ಎರಡನೇ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ ರೂ. 10,000 ದಂಡ ವಿಧಿಸುವ ಆದೇಶ ಹೊರಡಿಸಿದೆ.
ದೇಶದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ಗಳನ್ನ ಹೊಂದಿರುವ ಟಾಪ್ 10 ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದು. ಉತ್ತರ ಪ್ರದೇಶದಲ್ಲಿ ನಿನ್ನೆ 22,439 ಹೊಸ ಕೊರೊನಾ ಕೇಸ್ಗಳು ದಾಖಲಾಗಿವೆ. ನಿನ್ನೆ ರಾಜ್ಯ ಸರ್ಕಾರ 10 ರಾಜ್ಯಗಳ ನೈಟ್ ಕರ್ಫ್ಯೂ ಅವಧಿಯಲ್ಲೂ ಬದಲಾವಣೆ ಮಾಡಿದೆ.
ಈ ಹಿಂದೆ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಇದ್ದ ಸಮಯವನ್ನ ಇದೀಗ ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆಯವರೆಗೆ ನಿಗದಿ ಮಾಡಲಾಗಿದೆ.