ಕೈರೋ: ಸುಯೆಜ್ ಕಾಲುವೆಯಲ್ಲಿ ಕಳೆದ ಆರು ದಿನಗಳಿಂದ ಸಿಲುಕಿರುವ ಬೃಹತ್ ಸರಕುಸಾಗಣೆ ಹಡಗು ‘ಎವರ್ಗಿವನ್’ ಚಲಿಸುತ್ತಿದೆ ಎಂದು ಸುಯೆಜ್ ಕಾಲುವೆ ಪ್ರಾಧಿಕಾರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಇನ್ನೇನು ಸಮಸ್ಯೆ ಬಗೆಹರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ತೆರವುಗೊಳಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಹಡಗು ಕದಲಿದ ಪರಿಣಾಮ ಅಲ್ಲಿಯೇ ಲಂಗರು ಹಾಕಿರುವ ಸುಮಾರು ಇನ್ನೂರಕ್ಕೂ ಅಧಿಕ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನಕ್ಕೆ ಕೊಂಚ ಮಟ್ಟಿನ ಯಶಸ್ಸು ಸಿಕ್ಕಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಎವರ್ಗಿವನ್ ಮರೈನ್ ಸಂಸ್ಥೆ. ನಾವೀಗ ಕಷ್ಟದ ಸಂದರ್ಭದಲ್ಲಿ ಸಿಲುಕಿದ್ದೇವೆ. ಸುಯೆಜ್ನಲ್ಲಿ ಸಿಲುಕಿರುವ ಹಡಗನ್ನು ತೆರವುಗೊಳಿಸಲು ನಾವು ಕಳೆದೊಂದು ವಾರದಿಂದ ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಹಡಗು ತೆರವು ಕಾರ್ಯಾಚರಣೆ ಯಾವಾಗ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದಿತ್ತು.