ಕಿಡ್ನಿ ಸ್ಟೋನ್​ನಿಂದ ಹೊಟ್ಟೆನೋವು ಎಂದುಕೊಂಡ ಮಹಿಳೆಗೆ ಕಾದಿತ್ತು ಸರ್​ಪ್ರೈಸ್​: ಇದು ಹ್ಯಾಪಿ ಎಂಡಿಂಗ್ ಡೆಲಿವರಿ

ವಾಷಿಂಗ್ಟನ್: ​ಅಮೆರಿಕದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನಿಡಿದ್ದಕ್ಕೆ ಸುದ್ದಿಯಲ್ಲಿದ್ದಾರೆ. ಅರೆ! ಅದರಲ್ಲೇನು ವಿಶೇಷ ಎಂದುಕೊಂಡ್ರಾ? ಈ ಮಹಿಳೆಗೆ ತಾನು ಗರ್ಭಿಣಿ ಎಂಬ ವಿಷಯವೇ ತಿಳಿದಿರಲಿಲ್ಲ.

ಮಗುವಿಗೆ ಜನ್ಮ ನೀಡುವವರೆಗೂ ನಿಯಮಿತ ರುತುಚಕ್ರ ಹೊಂದಿದ್ದ ಮಹಿಳೆ ಕಿಡ್ನಿಯಲ್ಲಿ ಕಲ್ಲುಗಳಾಗಿರಬಹುದು. ಹೀಗಾಗಿ ಹೊಟ್ಟೆನೋವೆಂದು ಅಂದುಕೊಂಡಿದ್ದರು. ಮೆಲಿಸ್ಸಾ ಎಂಬಾಕೆ ಹೊಟ್ಟೆನೋವಿನಿಂದ ಬಳಲುತ್ತಿರುವುದನ್ನು ನೋಡಿದ ಪತಿ ಸಹ ಕಿಡ್ನಿಯಲ್ಲಿ ಕಲ್ಲುಗಳಾಗಿರಬಹುದೆಂದು ಭಾವಿಸಿ ಆಸ್ಪತ್ರೆಗೆ ಕರೆ ಮಾಡುತ್ತಾರೆ. ಆದರೆ ಮೆಲಿಸ್ಸಾ ಶೌಚಾಲಯಕ್ಕೆ ತೆರಳಿದಾಗ ಆಗಿದ್ದೇ ಬೇರೆ.

ಮೆಲಿಸ್ಸಾ ಅವರಿಗೆ ಶೌಚಾಲಯದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆಯಲ್ಲುಂಟಾದ ತೀವ್ರ ಸೆಳೆತದಿಂದ ಮೆಲಿಸ್ಸಾ ಜೋರಾಗಿ ಕಿರುಚಿದ್ದಾರೆ. ಬಳಿಕ ಹೊಟ್ಟೆಯಿಂದ ಏನೋ ಹೊರಬರುತ್ತಿದೆ ಎಂದಂದುಕೊಂಡು ನೋಡಿದಾಗ ಮಗುವಿನ ತಲೆ ಕಾಣಿಸಿದೆ. ಇದರಿಂದ ಅಚ್ಚರಿಯ ಜೊತೆಗೆ ಆಘಾತಕ್ಕೊಳಗಾಗಿದ್ದ ಮೆಲಿಸ್ಸಾ ಮತ್ತು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಮೆಲಿಸ್ಸಾ ಅವರಿಗೆ ಗರ್ಭಿಣಿಗಿರಬೇಕಾದ ಯಾವುದೇ ಲಕ್ಷಣಗಳಿರಲಿಲ್ಲ.

ಅಸಲಿಗೆ ತಾನು ಮಗುವಿಗೆ ಜನ್ಮ ನೀಡಲಿದ್ದೇನೆ ಎಂಬುದರ ಬಗ್ಗೆ ಸ್ವಲ್ಪವೂ ಸುಳಿವಿರಲಿಲ್ಲ ಎಂದು ಅವರ ಪತಿ ಹೇಳಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆನ್ನಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!